ADVERTISEMENT

2023 ರಲ್ಲಿ ಭಾರತದಲ್ಲಿ ಶೇ 10.3 ರವರೆಗೆ ವೇತನ ಏರಿಕೆ ಸಾಧ್ಯತೆ

ಐಎಎನ್ಎಸ್
Published 23 ಫೆಬ್ರುವರಿ 2023, 9:32 IST
Last Updated 23 ಫೆಬ್ರುವರಿ 2023, 9:32 IST
   

ನವದೆಹಲಿ: ಭಾರತದಲ್ಲಿ ವೇತನವು 2022 ರಲ್ಲಿ ಶೇ 10.6 ರಷ್ಟು ಏರಿಕೆಯಾಗಿದ್ದು, 2023 ರಲ್ಲಿ ಈ ಪ್ರಮಾಣ ಶೇ 10.3 ರಷ್ಟಾಗಿರುವ ನಿರೀಕ್ಷೆಯಿದೆ ಎಂದು ವರದಿಯೊಂದು ಹೇಳಿದೆ.

ವೇತನ ಏರಿಕೆ ಹಿಂದಿನ ವರ್ಷಕ್ಕಿಂತ ಕಡಿಮೆ ಇರಬಹುದು. ಆದರೆ ಆರ್ಥಿಕ ಹಿಂಜರಿತದ ಆತಂಕದ ನಡುವೆಯೂ ಏರಿಕೆ ಎರಡಂಕಿ ದಾಟಲಿದೆ ಎಂದು ಜಾಗತಿಕ ವೃತ್ತಿಪರ ಸೇವೆಗಳ ಸಂಸ್ಥೆಯಾದ ಎಒಎನ್‌ ವರದಿ ತಿಳಿಸಿದೆ.

2022ರಲ್ಲಿ ಉದ್ಯೋಗಿ ವಲಸೆ ಪ್ರಮಾಣ ಶೇ 21.4ಕ್ಕೆ ಹೆಚ್ಚಾಗಿದೆ. ‘ಭಾರತೀಯ ಕಂಪನಿಗಳು ಕಳೆದ ಎರಡು ವರ್ಷಗಳಲ್ಲಿ ಉತ್ತಮ ವೇತನ ಏರಿಕೆ ನೀಡಿವೆ. ಕೆಲವು ಕಂಪನಿಗಳು ಹೆಚ್ಚಿನ ವೇತನದೊಂದಿಗೆ ಹೋರಾಡುತ್ತಿವೆ’ ಎಂದು ಎಒಎನ್‌ನಲ್ಲಿನ ಭಾರತೀಯ ಮಾನವ ಸಂಪನ್ಮೂಲ ಪಾಲುದಾರ ರೂಪಂಕ್ ಚೌಧರಿ ಹೇಳಿದರು.

ADVERTISEMENT

‘ಭವಿಷ್ಯವನ್ನು ಎದುರು ನೋಡುವ ಸಂಸ್ಥೆಗಳು ಉದ್ಯೋಗಿಯ ಡಾಟಾದಲ್ಲಿನ ಮಾಹಿತಿ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ವೇತನ ಪರಿಷ್ಕರಣೆ ಮಾಡುತ್ತಿವೆ’ ಎಂದು ಚೌಧರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.