ADVERTISEMENT

ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 10, 10ಪ್ಲಸ್‌

ಶುಕ್ರವಾರದಿಂದ ಖರೀದಿಗೆ ಲಭ್ಯ: ಕಂಪನಿ ಅಧ್ಯಕ್ಷ ಎಚ್‌.ಸಿ. ಹಾಂಗ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 19:45 IST
Last Updated 20 ಆಗಸ್ಟ್ 2019, 19:45 IST
ಸ್ಯಾಮ್ಸಂಗ್‌ನ ಆಗ್ನೇಯ ಏಷ್ಯಾದ ಅಧ್ಯಕ್ಷ ಎಚ್‌.ಸಿ ಹಾಂಗ್‌ ಅವರು ಗ್ಯಾಲಕ್ಸಿ ನೋಟ್‌ 10 ಕಾರ್ಯವೈಖರಿಯನ್ನು ವಿವರಿಸಿದರು  –ಪ್ರಜಾವಾಣಿ ಚಿತ್ರ
ಸ್ಯಾಮ್ಸಂಗ್‌ನ ಆಗ್ನೇಯ ಏಷ್ಯಾದ ಅಧ್ಯಕ್ಷ ಎಚ್‌.ಸಿ ಹಾಂಗ್‌ ಅವರು ಗ್ಯಾಲಕ್ಸಿ ನೋಟ್‌ 10 ಕಾರ್ಯವೈಖರಿಯನ್ನು ವಿವರಿಸಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ಯಾಮ್ಸಂಗ್‌ ಕಂಪನಿಯು ಭಾರತದ ಮಾರುಕಟ್ಟೆಗೆ ಮಂಗಳವಾರ ಗ್ಯಾಲಕ್ಸಿ ನೋಟ್‌ 10 ಮತ್ತು ನೋಟ್‌ 10ಪ್ಲಸ್ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿರುವಸ್ಯಾಮ್ಸಂಗ್‌ ಒಪೇರಾ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಯಾಮ್ಸಂಗ್‌ನ ಆಗ್ನೇಯ ಏಷ್ಯಾದ ಅಧ್ಯಕ್ಷ ಎಚ್‌.ಸಿ. ಹಾಂಗ್ ಅವರು ಈ ಸಾಧನಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಸ್ಯಾಮ್ಸಂಗ್‌ ನೋಟ್ಸ್‌ನಲ್ಲಿಎಸ್‌ ಪೆನ್‌ ಮೂಲಕ ಬರೆದ ಕೈಬರಹವನ್ನು ಡಿಜಿಟಲ್‌ ಟೆಕ್ಸ್ಟ್‌ ಆಗಿ ಪರಿವರ್ತಿಸುವ ಆಯ್ಕೆ ಇದೆ. ಕನ್ನಡವನ್ನು ಹೊರತುಪಡಿಸಿ, ಹಿಂದಿ, ಮರಾಠಿ, ಉರ್ದು ಮತ್ತು ಇಂಗ್ಲಿಷ್‌ಗೆ ಬೆಂಬಲಿಸುತ್ತದೆ. ಎಸ್‌ ಪೆನ್‌ ರಿಮೋಟ್‌ ಕಂಟ್ರೋಲ್‌ ರೀತಿಯಲ್ಲಿ ಕೆಲಸ ಮಾಡಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.