ನವದೆಹಲಿ: ಬೆಂಗಳೂರಿನಲ್ಲಿ ವಿದ್ಯುತ್‌ಚಾಲಿತ ಏರ್ ಟ್ಯಾಕ್ಸಿ ಸೇವೆ (ಫ್ಲೈಯಿಂಗ್ ಟ್ಯಾಕ್ಸಿ) ಆರಂಭಿಸಲು ಸರಳಾ ಏವಿಯೇಷನ್ ಕಂಪನಿ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್) ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ.
ಈ ಏರ್ ಟ್ಯಾಕ್ಸಿಯು ಏಳು ಆಸನಗಳ ಸಾಮರ್ಥ್ಯ ಹೊಂದಿದೆ. ಸದ್ಯ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆ ಮಾರ್ಗದಲ್ಲಿ ತಲುಪಲು 152 ನಿಮಿಷ ಬೇಕಿದೆ. ಏರ್ ಟ್ಯಾಕ್ಸಿ ಸೇವೆ ಆರಂಭಗೊಂಡರೆ ಈ ಮಾರ್ಗವನ್ನು 19 ನಿಮಿಷದಲ್ಲಿ ತಲುಪಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ಒಬ್ಬರಿಗೆ ಪ್ರಯಾಣ ದರ ₹1,700 ಇರಲಿದೆ. ಮುಂಬೈ, ದೆಹಲಿ ಮತ್ತು ಪುಣೆಯಲ್ಲೂ ಈ ಸೇವೆ ಆರಂಭಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದೆ.
‘ಮುಂದಿನ 2–3 ವರ್ಷದಲ್ಲಿ ಇದರ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು. ಇದ ಪರಿಸರ ಸ್ನೇಹಿಯಾಗಿದೆ. ಸಾಂಪ್ರದಾಯಿಕ ಹೆಲಿಕಾಪ್ಟರ್ ಸೇವೆಗೆ ಹೋಲಿಸಿದರೆ ಇದರ ವೆಚ್ಚ ಕಡಿಮೆಯಾಗಿದೆ. ಸಾರ್ವಜನಿಕರಿಗೆ ಕೈಗಟಕುವ ದರದಲ್ಲಿ ಸೇವೆ ದೊರೆಯಲಿದೆ’ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.