ಬೆಂಗಳೂರು: ರಿಲಯನ್ಸ್ ರಿಟೇಲ್ ಕಂಪನಿಯು ಎಸ್ಬಿಐ ಕಾರ್ಡ್ ಜೊತೆಗೂಡಿ ‘ರಿಲಯನ್ಸ್ ಎಸ್ಬಿಐ ಕಾರ್ಡ್’ ಎನ್ನುವ ಕೊ–ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ಗಳನ್ನು ಬಿಡುಗಡೆ ಮಾಡಿದೆ.
ದಿನಸಿ, ಔಷಧ, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಬಟ್ಟೆ ಹೀಗೆ ಎಲ್ಲ ರೀತಿಯ ಖರೀದಿ ವೇಳೆ ಈ ಕಾರ್ಡ್ಗಳನ್ನು ಬಳಸಿದರೆ ಉತ್ತಮ ರಿವಾರ್ಡ್ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಬಳಿಸಿ ಈ ಕಾರ್ಡ್ ಸಿದ್ಧಪಡಿಸಲಾಗಿದೆ. ರಿಲಯನ್ಸ್ ಎಸ್ಬಿಐ ಕಾರ್ಡ್ ಪ್ರೈಮ್ನ ವಾರ್ಷಿಕ ನವೀಕರಣ ಶುಲ್ಕ ₹2,999ರ ಜೊತೆಗೆ ತೆರಿಗೆ ಅನ್ವಿಸಲಿದೆ. ರಿಲಯನ್ಸ್ ಕಾರ್ಡ್ನ ಶುಲ್ಕವು ₹499ರ ಜೊತೆಗೆ ತೆರಿಗೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.