ADVERTISEMENT

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಶುಲ್ಕ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 16:24 IST
Last Updated 31 ಅಕ್ಟೋಬರ್ 2024, 16:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) ತನ್ನ ಕ್ರೆಡಿಟ್‌ ಕಾರ್ಡ್‌ ಶುಲ್ಕವನ್ನು ಪರಿಷ್ಕರಿಸಿದ್ದು, ಶುಕ್ರವಾರದಿಂದ ಈ ಹೊಸ ಶುಲ್ಕವು ಜಾರಿಗೆ ಬರಲಿದೆ.

ಹಣಕಾಸಿನ ಭದ್ರತೆ ಇಲ್ಲದ (ಅನ್‌ ಸೆಕ್ಯೂರ್ಡ್) ಕಾರ್ಡ್‌ಗಳ ಮೇಲಿನ ಮಾಸಿಕ ಫೈನಾನ್ಸ್‌ ಶುಲ್ಕವನ್ನು (ಬಡ್ಡಿದರ) ಶೇ 3.75ರಷ್ಟು ಹೆಚ್ಚಿಸಲಾಗಿದೆ. ಇದು ಶೌರ್ಯ ಹಾಗೂ ಡೆಫೆನ್ಸ್ ಕಾರ್ಡ್‌ಗೆ ಅನ್ವಯಿಸುವುದಿಲ್ಲ ಎಂದು ಎಸ್‌ಬಿಐನ ವೆಬ್‌ಸೈಟ್‌ ತಿಳಿಸಿದೆ.

ಡಿಸೆಂಬರ್‌ 1ರಿಂದ ಜಾರಿ‌:

ADVERTISEMENT

ಅಧಿಕ ಮೊತ್ತದ ಯುಟಿಲಿಟಿ ಬಿಲ್ ಪಾವತಿಸಿದರೆ ಅದರ ಮೇಲೆ ಶೇ 1ರಷ್ಟು ಹೆಚ್ಚುವರಿ ಶುಲ್ಕ (ಸರ್​ಚಾರ್ಜ್) ವಿಧಿಸಲಾಗುತ್ತದೆ. ಪಾವತಿ ಮೊತ್ತವು ₹50 ಸಾವಿರ ಮೀರಿದರೆ ಸರ್​ಚಾರ್ಜ್ ಹಾಕಲಾಗುತ್ತದೆ. ವಿದ್ಯುತ್, ಅಡುಗೆ ಅನಿಲ ಸಿಲಿಂಡರ್‌ ಮತ್ತು ನೀರಿನ ಬಿಲ್ ಇತ್ಯಾದಿ ಯುಟಿಲಿಟಿ ಪಾವತಿಗಳಿಗೆ ಈ ಶುಲ್ಕ ಅನ್ವಯವಾಗಲಿದೆ.

ಈ ಹೊಸ ಶುಲ್ಕವು ಡಿಸೆಂಬರ್‌ 1ರಿಂದ ಜಾರಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.