ADVERTISEMENT

ಗೃಹಸಾಲ: ಎಸ್‌ಬಿಐ ಮೈಲಿಗಲ್ಲು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:49 IST
Last Updated 10 ಫೆಬ್ರುವರಿ 2021, 16:49 IST

ಬೆಂಗಳೂರು: ಗೃಹ ಸಾಲಗಳನ್ನು ನೀಡುವಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹೊಸ ಮೈಲಿಗಲ್ಲೊಂದನ್ನು ಕ್ರಮಿಸಿದೆ. ಬ್ಯಾಂಕ್‌ 2011ರಿಂದ ಇದುವರೆಗೆ ಒಟ್ಟು ₹ 5 ಲಕ್ಷ ಕೋಟಿಯಷ್ಟು ಮೊತ್ತವನ್ನು ಗೃಹ ಸಾಲವಾಗಿ ವಿತರಣೆ ಮಾಡಿದೆ. 2024ರ ಸುಮಾರಿಗೆ ಒಟ್ಟು ₹ 7 ಲಕ್ಷ ಕೋಟಿಯಷ್ಟನ್ನು ಗೃಹ ಸಾಲವಾಗಿ ವಿತರಿಸುವ ಗುರಿಯನ್ನು ಹೊಂದಿದೆ.

ಗೃಹ ಸಾಲ ಮಾರುಕಟ್ಟೆಯಲ್ಲಿ ಎಸ್‌ಬಿಐ ಸರಿಸುಮಾರು ಶೇಕಡ 35ರಷ್ಟು ಪಾಲು ಹೊಂದಿದೆ. ದಿನವೊಂದಕ್ಕೆ ಹೊಸದಾಗಿ ಒಂದು ಸಾವಿರ ಜನರಿಗೆ ಗೃಹ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ದಿನೇಶ್ ಖರಾ ಅವರು ಬುಧವಾರ ನಡೆದ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್–19 ಸೃಷ್ಟಿಸಿದ ಸಂಕಷ್ಟದ ಅವಧಿಯಲ್ಲೂ ಗೃಹ ಸಾಲಗಳಲ್ಲಿನ ಅನುತ್ಪಾದಕ ಸಾಲಗಳ (ಎನ್‌ಪಿಎ) ಪ್ರಮಾಣ ಕಡಿಮೆಯೇ ಇತ್ತು ಎಂದು ಅವರು ಹೇಳಿದರು.

ADVERTISEMENT

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಎಸ್‌ಬಿಐ 2020ರ ಡಿಸೆಂಬರ್‌ವರೆಗೆ ಒಟ್ಟು 1.94 ಲಕ್ಷ ಗೃಹ ಸಾಲ ವಿತರಣೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.