ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಪ್ರಕಟಿಸಿರುವ ದೇಶೀಯವಾಗಿ ವ್ಯವಸ್ಥಿತ ಹಾಗೂ ಮಹತ್ವದ ಬ್ಯಾಂಕ್‌ಗಳ (ಡಿ–ಎಸ್‌ಐಬಿ) ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಮತ್ತೆ ಸ್ಥಾನ ಪಡೆದಿವೆ.
ಬ್ಯಾಂಕ್‌ಗಳು ಬಂಡವಾಳ ಸೃಷ್ಟಿಯಲ್ಲಿ ಹೊಂದಿರುವ ಸಾಮಾನ್ಯ ಈಕ್ವಿಟಿ ಶ್ರೇಣಿ 1 (ಸಿಇಟಿ1) ಅನುಪಾತ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಶ್ರೇಣಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಬ್ಯಾಂಕ್ ಹೊಂದಿರುವ ಬಂಡವಾಳ ಸಾಮರ್ಥ್ಯದ ಸೂಚಕವಾಗಿದೆ.
ಬ್ಯಾಂಕ್‌ಗಳಿಂದ ಮಾರ್ಚ್‌ನಲ್ಲಿ ಸಂಗ್ರಹಿಸಿದ ದತ್ತಾಂಶ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ.
2014ರಲ್ಲಿ ಮೊದಲ ಬಾರಿಗೆ ಆರ್‌ಬಿಐ ಈ ಚೌಕಟ್ಟನ್ನು ರೂಪಿಸಿತು. 2015 ಮತ್ತು 2016ರಲ್ಲಿ ಎಸ್‌ಬಿಐ ಹಾಗೂ ಐಸಿಐಸಿಐ ಬ್ಯಾಂಕ್ ಈ ಪಟ್ಟಿಯಲ್ಲಿ ಸ್ಥಾನ ಪಡೆದವು. 2017ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಪಟ್ಟಿಗೆ ಸೇರ್ಪಡೆಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.