ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ₹ 2 ಕೋಟಿಗಿಂತ ಹೆಚ್ಚಿನ ಮೊತ್ತದ ವಿವಿಧ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡ 0.40ರಿಂದ ಶೇ 0.90ರವರೆಗೆ ಹೆಚ್ಚಿಸಿದೆ. ಇದು ಮಂಗಳವಾರದಿಂದ ಜಾರಿಗೆ ಬಂದಿದೆ.
ಒಂದು ವರ್ಷಕ್ಕಿಂತ ಹೆಚ್ಚಿನ, ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 0.40ರಷ್ಟು ಹೆಚ್ಚಿಸಲಾಗಿದೆ. ಎರಡು ವರ್ಷಕ್ಕಿಂತ ಹೆಚ್ಚಿನ ಹಾಗೂ ಮೂರು ವರ್ಷದವರೆಗಿನ ಠೇವಣಿಯ ಬಡ್ಡಿ ದರ ಶೇ 0.65ರಷ್ಟು, ಮೂರು ವರ್ಷಕ್ಕಿಂತ ಹೆಚ್ಚಿನ ಹಾಗೂ ಹತ್ತು ವರ್ಷದವರೆಗಿನ ಠೇವಣಿ ಬಡ್ಡಿ ದರ ಶೇ 0.90ರಷ್ಟು ಜಾಸ್ತಿ ಆಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಓದಿ...ಎಚ್ಡಿಎಫ್ಸಿ, ವೈಶ್ಯ ಬ್ಯಾಂಕ್ನಿಂದ ಬಡ್ಡಿದರ ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.