ADVERTISEMENT

ವೆಚ್ಚ ತಗ್ಗಿಸಲು ಮುಂದಾದ ಎಸ್‌ಬಿಐನಿಂದ ವಿಆರ್‌ಎಸ್‌ ಯೋಜನೆ ಜಾರಿಗೆ ಸಿದ್ಧತೆ

ಪಿಟಿಐ
Published 6 ಸೆಪ್ಟೆಂಬರ್ 2020, 15:41 IST
Last Updated 6 ಸೆಪ್ಟೆಂಬರ್ 2020, 15:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವೆಚ್ಚ ತಗ್ಗಿಸುವ ಉದ್ದೇಶದಿಂದ ತನ್ನ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿಗೆ ತರಲು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮುಂದಾಗಿದೆ. 30,190 ಸಿಬ್ಬಂದಿ ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

2020ರ ಮಾರ್ಚ್‌ ಅಂತ್ಯಕ್ಕೆ ಬ್ಯಾಂಕ್‌ನ ಒಟ್ಟಾರೆ ಸಿಬ್ಬಂದಿ ಸಂಖ್ಯೆ 2.49 ಲಕ್ಷ ಇತ್ತು. ಮೂಲಗಳ ಪ್ರಕಾರ, ವಿಆರ್‌ಎಸ್‌ಗೆ ಕರಡು ಯೋಜನೆ ಸಿದ್ಧಪಡಿಸಿದ್ದು, ಆಡಳಿತ ಮಂಡಳಿಯ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

ಉದ್ದೇಶಿತ ‘ಸೆಕೆಂಡ್‌ ಇನ್ನಿಂಗ್ಸ್‌ ಟ್ಯಾಪ್‌ ವಿಆರ್‌ಎಸ್‌–2020’ ಯೋಜನೆಯು ಮಾನವ ಸಂಪನ್ಮೂಲದ ಸದ್ಬಳಕೆ ಮತ್ತು ವೆಚ್ಚ ತಗ್ಗಿಸುವ ಗುರಿ ಹೊಂದಿದೆ.

ADVERTISEMENT

ವಿಆರ್‌ಎಸ್‌ಗೆ ಅರ್ಹರಾಗಿರುವ ಸಿಬ್ಬಂದಿಯ ಪೈಕಿ ಶೇಕಡ 30ರಷ್ಟು ಮಂದಿ ಸ್ವಯಂ ನಿವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಅದರಿಂದ ಬ್ಯಾಂಕ್‌ಗೆ ನಿವ್ವಳ ₹ 1,662.86 ಕೋಟಿ ಉಳಿತಾಯ ಆಗಲಿದೆ. 2020ರ ಜುಲೈನ ವೇತನದ ಆಧಾರದ ಮೇಲೆ ಈ ಮೊತ್ತವನ್ನು ಅಂದಾಜು ಮಾಡಲಾಗಿದೆ. ಯೋಜನೆಯು ಡಿಸೆಂಬರ್‌ 1ರಂದು ಆರಂಭವಾಗಲಿದ್ದು, ಫೆಬ್ರುವರಿ ಅಂತ್ಯದವರೆಗೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಬ್ಯಾಂಕ್‌ನ ಸಿಬ್ಬಂದಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.