ADVERTISEMENT

ಎಸ್‌ಬಿಐ: ಎಟಿಎಂ ಸುರಕ್ಷತೆಗೆ ಜ. 1ರಿಂದ ‘ಒಟಿಪಿ’ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 14:11 IST
Last Updated 27 ಡಿಸೆಂಬರ್ 2019, 14:11 IST
ಎಸ್‌ಬಿಐ ಲಾಂಛನ
ಎಸ್‌ಬಿಐ ಲಾಂಛನ   

ಮುಂಬೈ: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಎಟಿಎಂ ವಹಿವಾಟಿಗೆ ಹೆಚ್ಚಿನ ಸುರಕ್ಷತೆ ಕಲ್ಪಿಸಲು ಜನವರಿ 1 ರಿಂದ ಒಂದು ಬಾರಿ ರಹಸ್ಯ ಸಂಖ್ಯೆ (ಒಟಿಪಿ) ಬಳಸುವ ಸೌಲಭ್ಯ ಜಾರಿಗೆ ತರುತ್ತಿದೆ.

ಎಟಿಎಂ ವಹಿವಾಟಿಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗ್ರಾಹಕರ ಹಿತರಕ್ಷಿಸಲು ಬ್ಯಾಂಕ್‌ಗಳು ಹೆಚ್ಚೆಚ್ಚು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುತ್ತಿವೆ.

ಬ್ಯಾಂಕ್‌ನಲ್ಲಿ ನೋಂದಾವಣೆಗೊಂಡಿರುವ ಗ್ರಾಹಕರ ಮೊಬೈಲ್‌ಗೆ ಕಳಿಸಲಾಗುವ ‘ಒಟಿ‍ಪಿ’ಯನ್ನು ಎಟಿಎಂ ಪರದೆಯಲ್ಲಿ ನಮೂದಿಸಿದರೆ ಮಾತ್ರ ಎಟಿಎಂಗಳಿಂದ ಹಣ ಪಡೆಯುವ ಸೌಲಭ್ಯ ಇದಾಗಿದೆ. ₹ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಎಟಿಎಂಗಳಿಂದ ಪಡೆಯುವಾಗ ಈ ಸುರಕ್ಷತಾ ಸೌಲಭ್ಯ ಉಪಯೋಗಕ್ಕೆ ಬರಲಿದೆ. ಇದರಿಂದ ಎಟಿಎಂ ಕಾರ್ಡ್‌ಗಳ ದುರ್ಬಳಕೆಗೆ ತಡೆ ಬೀಳಲಿದೆ.

ADVERTISEMENT

‘ಒಟಿಪಿ’ ಆಧಾರಿತ ಹಣ ಪಡೆಯುವ ಸೌಲಭ್ಯವು ಎಸ್‌ಬಿಐನ ಎಲ್ಲ ಎಟಿಎಂಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಗಿನ 8 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಈ ಸೌಲಭ್ಯವನ್ನು ನ್ಯಾಷನಲ್‌ ಫೈನಾನ್ಶಿಯಲ್‌ ಸ್ವಿಚ್‌ನಲ್ಲಿ (ಎನ್‌ಎಫ್‌ಎಸ್‌) ಅಭಿವೃದ್ಧಿಪಡಿಸಿಲ್ಲ. ಹೀಗಾಗಿ ಎಸ್‌ಬಿಐ ಗ್ರಾಹಕರು ಅನ್ಯ ಬ್ಯಾಂಕ್‌ಗಳ ಎಟಿಎಂ ಬಳಸುವಾಗ ಈ ‘ಒಟಿಪಿ’ ಕಾರ್ಯನಿರ್ವಹಿಸುವುದಿಲ್ಲ ಎಂದು ಎಸ್‌ಬಿಐ ತನ್ನ ಟ್ವೀಟರ್‌ ಖಾತೆಯಲ್ಲಿ ತಿಳಿಸಿದೆ.

* ₹ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತಕ್ಕೆ ‘ಒಟಿಪಿ’ ಅನ್ವಯ

* ಒಂದು ‘ಒಟಿಪಿ’ಯನ್ನು ಒಂದು ಬಾರಿ ಮಾತ್ರ ಬಳಕೆ

* ಅನ್ಯ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಈ ಸುರಕ್ಷತಾ ಸೌಲಭ್ಯ ಅನ್ವಯವಾಗದು

* ಎಸ್‌ಬಿಐ ಎಟಿಎಂಗಳ ಸದ್ಯದ ವಹಿವಾಟಿನ ಸ್ವರೂಪದಲ್ಲಿ ಪ್ರಮುಖ ಬದಲಾವಣೆ ಇಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.