ADVERTISEMENT

ಎಸ್‌ಬಿಐ: ಐಎಂಪಿಎಸ್‌ ಸೇವೆಗೆ ಶುಲ್ಕ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 14:59 IST
Last Updated 4 ಜನವರಿ 2022, 14:59 IST

ಬೆಂಗಳೂರು: ಐಎಂಪಿಎಸ್ ಸೇವೆ ಬಳಿಸಿ, ಎಸ್‌ಬಿಐ ಬ್ಯಾಂಕ್‌ ಶಾಖೆಗಳ ಮೂಲಕ ₹ 2 ಲಕ್ಷದಿಂದ ₹ 5 ಲಕ್ಷದವರೆಗಿನ ಮೊತ್ತ ವರ್ಗಾವಣೆ ಮಾಡುವುದಕ್ಕೆ ಇನ್ನು ಮುಂದೆ ₹ 20 (ಜಿಎಸ್‌ಟಿ ಪ್ರತ್ಯೇಕ) ಶುಲ್ಕ ಪಾವತಿಸಬೇಕು. ಇದಕ್ಕಿಂತ ಕಡಿಮೆ ಮೊತ್ತವನ್ನು ಐಎಂಪಿಎಸ್ ಸೇವೆ ಬಳಸಿ ಬ್ಯಾಂಕ್ ಶಾಖೆಗಳ ಮೂಲಕ ವರ್ಗಾವಣೆ ಮಾಡಿದರೆ ಪಾವತಿಸಬೇಕಾದ ಶುಲ್ಕದಲ್ಲಿ ಬದಲಾವಣೆ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.

₹ 5 ಲಕ್ಷದವರೆಗಿನ ಮೊತ್ತವನ್ನು ಐಎಂಪಿಎಸ್‌ ಸೇವೆ ಬಳಸಿ, ಬ್ಯಾಂಕ್‌ನ ಡಿಜಿಟಲ್ ಬ್ಯಾಂಕಿಂಗ್ ವೇದಿಕೆಗಳ ಮೂಲಕ ವರ್ಗಾವಣೆ ಮಾಡಿದಲ್ಲಿ ಗ್ರಾಹಕರು ಯಾವ ಶುಲ್ಕವನ್ನೂ ಪಾವತಿಸಬೇಕಾಗಿಲ್ಲ. ಹೊಸ ಶುಲ್ಕವು ಫೆಬ್ರುವರಿ 1ರಿಂದ ಜಾರಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT