ADVERTISEMENT

ಸರಕು ಸಾಗಣೆಗೆ ಡ್ರೋನ್‌ ಬಳಕೆ: ಒಪ್ಪಂದಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 17:02 IST
Last Updated 6 ಏಪ್ರಿಲ್ 2023, 17:02 IST
ಕ್ರಿಟಿಕಲ್‌ಲಾಗ್‌ ಇಂಡಿಯಾ ಸಿಇಒ ಸುಜಯ್ ಗುಹಾ ಮತ್ತು ಸ್ಕಾಂಡ್ರನ್‌ ಸಿಇಒ ಅರ್ಜುನ್‌ ನಾಯ್ಕ್‌
ಕ್ರಿಟಿಕಲ್‌ಲಾಗ್‌ ಇಂಡಿಯಾ ಸಿಇಒ ಸುಜಯ್ ಗುಹಾ ಮತ್ತು ಸ್ಕಾಂಡ್ರನ್‌ ಸಿಇಒ ಅರ್ಜುನ್‌ ನಾಯ್ಕ್‌   

ಬೆಂಗಳೂರು: ಸರಕು ಸಾಗಣೆಯಲ್ಲಿ ಬಳಸುವ ಡ್ರೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಸ್ಕಾಂಡ್ರನ್‌ ಪ್ರೈ.ಲಿ ಹಾಗೂ ಸರಕು ಸಾಗಣೆ ಕಂಪನಿ ಕ್ರಿಟಿಕಲ್‌ಲಾಗ್‌ ಇಂಡಿಯಾ ಪ್ರೈ.ಲಿ. ಕಂಪನಿಗಳು ಡ್ರೋನ್‌ ಬಳಸಿ ಸರಕು ಸಾಗಣೆ ಸೇವೆ ಒದಗಿಸಲು ಒಪ್ಪಂದ ಮಾಡಿಕೊಂಡಿವೆ.

‍ಪಾಲುದಾರಿಕೆಯ ಮೌಲ್ಯವು ₹ 600 ಕೋಟಿ. ದೇಶದ 160 ನಗರಗಳನ್ನು ಇದು ಒಳಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ. ದೇಶದಲ್ಲಿ ಈ ಮಾದರಿಯ ಒಪ್ಪಂದ ಆಗುತ್ತಿರುವುದು ಇದೇ ಮೊದಲು, ಈ ಒಪ್ಪಂದವು ಬಿ2ಬಿ ವಿಭಾಗದಲ್ಲಿ ಡ್ರೋನ್‌ ತಂತ್ರಜ್ಞಾನವನ್ನು ಬಳಸಿಕೊಂಡು ಸರಕು ಸಾಗಣೆ ಸೇವೆ ಒದಗಿಸುವುದರ ಅಗತ್ಯವನ್ನು ಹೇಳುತ್ತಿದೆ ಎಂದು ಕೂಡ ಪ್ರಕಟಣೆ ತಿಳಿಸಿದೆ.

‘ನಮ್ಮ ಒಪ್ಪಂದವು ಗ್ರಾಹಕರಿಗೆ ಹೊಸ ಬಗೆಯ ಸೇವೆಗಳನ್ನು ಒದಗಿಸಲಿದೆ’ ಎಂದು ಸ್ಕಾಂಡ್ರನ್‌ ಕಂಪನಿಯ ಸಿಇಒ ಅರ್ಜುನ್ ನಾಯ್ಕ್‌ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.