ADVERTISEMENT

ಹುಂಡೈ, ಸ್ವಿಗ್ಗಿ ಐಪಿಒಗೆ ಸೆಬಿ ಅಸ್ತು

ಪಿಟಿಐ
Published 25 ಸೆಪ್ಟೆಂಬರ್ 2024, 15:53 IST
Last Updated 25 ಸೆಪ್ಟೆಂಬರ್ 2024, 15:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಹುಂಡೈ ಮೋಟರ್‌ ಇಂಡಿಯಾ ಲಿಮಿಟೆಡ್‌ ಮತ್ತು ಸ್ವಿಗ್ಗಿ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸುವುದಕ್ಕೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅನುಮತಿ ನೀಡಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ. 

ಹುಂಡೈ ₹25 ಸಾವಿರ ಕೋಟಿ ಬಂಡವಾಳ ಸಂಗ್ರಹಕ್ಕೆ ನಿರ್ಧರಿಸಿದೆ. ದೇಶದಲ್ಲಿ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಐಪಿಒ ಮೂಲಕ ₹21 ಸಾವಿರ ಕೋಟಿ ಸಂಗ್ರಹಿಸಿತ್ತು.  

ದೇಶದಲ್ಲಿ ಐಪಿಒ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ. ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 60ಕ್ಕೂ ಹೆಚ್ಚು ಕಂಪನಿಗಳು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಿವೆ.

ADVERTISEMENT

ಹುಂಡೈ ಕಂಪನಿಯು ಜೂನ್‌ನಲ್ಲಿ ಸಲ್ಲಿಸಿರುವ ಕರಡು ದಾಖಲೆ ಪತ್ರಗಳ (ಡಿಆರ್‌ಎಚ್‌ಪಿ) ಪ್ರಕಾರ ಆಫರ್‌ ಫಾರ್‌ ಸೇಲ್‌ ಮೂಲಕ 14.21 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ.

2003ರಲ್ಲಿ ಜಪಾನ್‌ನ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಐಪಿಒ ಮೂಲಕ ಬಂಡವಾಳ ಸಂಗ್ರಹಿಸಿತ್ತು. ಎರಡು ದಶಕದ ಬಳಿಕ ಹುಂಡೈ ಐಪಿಒದಡಿ ಬಂಡವಾಳ ಸಂಗ್ರಹಿಸುತ್ತಿದೆ. ಹಾಗಾಗಿ, ದೇಶದ ಆಟೊಮೊಬೈಲ್‌ ವಲಯದಲ್ಲಿ ಇದು ಮಹತ್ವದ ಮೈಲಿಗಲ್ಲು ಆಗಿದೆ. 

ಸ್ವಿಗ್ಗಿಯಿಂದ ಎಷ್ಟು ಸಂಗ್ರಹ?:

ಸ್ವಿಗ್ಗಿ ಕಂಪನಿಯು ಈಕ್ವಿಟಿ ಷೇರುಗಳ ಮಾರಾಟದಿಂದ ₹3,750 ಕೋಟಿ ಹಾಗೂ ಆಫರ್‌ ಫಾರ್‌ ಸೇಲ್‌ ಮೂಲಕ ಹೆಚ್ಚುವರಿಯಾಗಿ ₹6,664 ಕೋಟಿ ಬಂಡವಾಳ ಸಂಗ್ರಹಿಸಲಿದೆ. ಐಪಿಒಗೂ ಮೊದಲು ಆರಂಭಿಕ ಹೂಡಿಕೆದಾರರಿಂದ (ಆ್ಯಂಕರ್‌ ಇನ್‌ವೆಸ್ಟರ್) ₹750 ಕೋಟಿ ಬಂಡವಾಳ ಸಂಗ್ರಹಿಸಲು ತೀರ್ಮಾನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.