ನವದೆಹಲಿ: ಸೆನ್ಕೊ ಗೋಲ್ಡ್ ಕಂಪನಿಯು ₹ 525 ಕೋಟಿ ಮೊತ್ತದ ಐಪಿಒಗಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿದೆ.
ಈ ಐಪಿಒದಲ್ಲಿ, ₹ 325 ಕೋಟಿ ಮೊತ್ತದ ಹೊಸ ಷೇರುಗಳು ಹಾಗೂ ₹ 200 ಕೋಟಿ ಮೊತ್ತದ ಒಎಫ್‌ಎಸ್ ಒಳಗೊಂಡಿದೆ.
ಹೊಸ ಷೇರುಗಳನ್ನು ಮಾರಾಟ ಮಾಡುವುದರಿಂದ ಬರುವ ಮೊತ್ತದಲ್ಲಿ ₹ 240 ಕೋಟಿಯನ್ನು ದುಡಿಯುವ ಬಂಡವಾಳದ ಅಗತ್ಯಗಳಿಗೆ ಬಳಸಿಕೊಳ್ಳಲು ಕಂಪನಿ ಉದ್ದೇಶಿಸಿದೆ. ಇನ್ನುಳಿದ ಮೊತ್ತವನ್ನು ಇತರೆ ಕಾರ್ಪೊರೇಟ್ ಉದ್ದೇಶಗಳಿಗೆ ವಿನಿಯೋಗಿಸುವುದಾಗಿ ಅದು ಹೇಳಿದೆ.
ಸದ್ಯ, ಕಂಪನಿಯು 13 ರಾಜ್ಯಗಳಲ್ಲಿ ಒಟ್ಟಾರೆ 127 ಷೋರೂಂಗಳನ್ನು ಹೊಂದಿದೆ. ಕಂಪನಿಯ ಕಾರ್ಯಾಚರಣಾ ವರಮಾನ 2021ರ ಮಾರ್ಚ್ 31ರ ಅಂತ್ಯಕ್ಕೆ ₹ 2,660 ಕೋಟಿಗಳಿಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.