ಮುಂಬೈ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿವೆ.
ಸೆನ್ಸೆಕ್ಸ್ 1,289.89 ಪಾಯಿಂಟ್‌ಗಳಿಂದ 80,407 ಗೆ ಜಿಗಿದಿದೆ. ನಿಫ್ಟಿ 405.25 ಪಾಯಿಂಟ್ ಏರಿಕೆ ಕಂಡು 24,312.50ಕ್ಕೆ ತಲುಪಿದೆ.
30-ಷೇರುಗಳ ಸೆನ್ಸೆಕ್ಸ್ ಪ್ಯಾಕ್‌ನಿಂದ, ಮಹೀಂದ್ರಾ ಮತ್ತು ಮಹೀಂದ್ರಾ, ಲಾರ್ಸೆನ್ ಮತ್ತು ಟೂಬ್ರೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಅತಿ ಹೆಚ್ಚು ಲಾಭ ಗಳಿಸಿದವು.
ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟದ ಪ್ರಚಂಡ ಗೆಲುವು ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.