ADVERTISEMENT

LS Polls Results| ಷೇರುಪೇಟೆಯಲ್ಲಿ ಆರಂಭಿಕ ಕುಸಿತ: ಸೆನ್ಸೆಕ್ಸ್, ನಿಫ್ಟಿ ಇಳಿಕೆ

ಪಿಟಿಐ
Published 4 ಜೂನ್ 2024, 4:52 IST
Last Updated 4 ಜೂನ್ 2024, 4:52 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಲೋಕಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಟ್ರೆಂಡ್ ಬಳಿಕ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 1,715.78 ಅಂಶಗಳಷ್ಟು ಕುಸಿದು 74,753ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 539.1 ಅಂಶಗಳಷ್ಟು ಕುಸಿದು 22,724.80ರಲ್ಲಿ ವಹಿವಾಟು ನಡೆಸಿದೆ.

ಸೆನ್ಸೆಕ್ಸ್‌ನ ಲಾರ್ಸನ್ ಅಂಡ್ ಟೌಬ್ರೋ, ಪವರ್ ಗ್ರಿಡ್, ಎನ್‌ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚು ನಷ್ಟ ಅನುಭವಿಸಿವೆ.

ADVERTISEMENT

ಆರಂಭಿಕ ಟ್ರೆಂಡ್‌ನಲ್ಲಿ ಎನ್‌ಡಿಎ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಮಡರೆ, ಇಂಡಿಯಾ ಬಣ 200ಕ್ಕೂ ಅಧಿಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿತ್ತು.

ವಿದೇಶಿ ಹೂಡಿಕೆದಾರರು ಸೋಮವಾರ ದೇಶೀಯ ಷೇರುಪೇಟೆಯಲ್ಲಿ ₹6,850.76 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಷೇರುಪೇಟೆ ಅಂಕಿ ಅಂಶದಿಂದ ತಿಳಿದುಬಮದಿದೆ.

ಸೋಲ್, ಟೋಕಿಯೊ, ಶಾಂಘೈ ಷೇರುಪೇಟೆಗಳೂ ನಷ್ಟ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.