ADVERTISEMENT

ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಸೇವಾ ವಲಯದ ಚಟುವಟಿಕೆ

ಪಿಟಿಐ
Published 5 ಮೇ 2022, 12:51 IST
Last Updated 5 ಮೇ 2022, 12:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಏಪ್ರಿಲ್‌ನಲ್ಲಿ ಇನ್ನಷ್ಟು ಸುಧಾರಿಸಿಕೊಂಡಿದ್ದು, ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ.

ಬೇಡಿಕೆ ಹೆಚ್ಚಾಗುತ್ತಿರುವುದರಿಂದ ವಲಯದ ಚಟುವಟಿಕೆಗೆ ಉತ್ತೇಜನ ದೊರೆಯುತ್ತಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ಹೇಳಿದೆ.

ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಸೂಚ್ಯಂಕವು ಮಾರ್ಚ್‌ನಲ್ಲಿ 53.6ರಷ್ಟು ಇತ್ತು. ಏಪ್ರಿಲ್‌ನಲ್ಲಿ 57.9ಕ್ಕೆ ಏರಿಕೆ ಆಗಿದೆ. 2021ರ ನವೆಂಬರ್‌ ಬಳಿಕದ ವೇಗದ ಬೆಳವಣಿಗೆ ಇದಾಗಿದೆ. ಬೆಲೆ ಏರಿಕೆಯ ಒತ್ತಡದ ನಡುವೆಯೇ ಈ ಪ್ರಮಾಣದ ಬೆಳವಣಿಗೆ ಕಂಡುಬಂದಿದೆ.

ADVERTISEMENT

ಸತತ ಒಂಬತ್ತನೇ ತಿಂಗಳಿನಲ್ಲಿಯೂ ಸೇವಾ ವಲಯವು ಸಕಾರಾತ್ಮಕ ಹಾದಿಯಲ್ಲಿದೆ.

ಸೇವೆಗಳನ್ನು ನೀಡುವವರು ಆಹಾರ, ಇಂಧನ ಮತ್ತು ಇತರೆ ವಸ್ತುಗಳಿಗೆ ಹೆಚ್ಚು ಪಾವತಿ ಮಾಡುವಂತಾಗಿದೆ. ಒಟ್ಟಾರೆ ವೆಚ್ಚವು ಹೆಚ್ಚಾಗುತ್ತಿದೆ. ಹೀಗಾಗಿ ಪ್ರಮುಖ ಕಂಪನಿಗಳು ಮಾರಾಟ ದರವನ್ನು ಐದು ವರ್ಷಗಳ ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ತಯಾರಿಕೆ ಮತ್ತು ಸೇವೆಗಳನ್ನು ಒಳಗೊಂಡ ಕಂಪೊಸಿಟ್‌ ಪಿಎಂಐ ಇಂಡೆಕ್ಸ್‌ 54.3ರಿಂದ 57.6ಕ್ಕೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.