ADVERTISEMENT

12 ಸಾವಿರ ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ ತರಬೇತಿ: Space Kidz India

ಪಿಟಿಐ
Published 13 ಅಕ್ಟೋಬರ್ 2024, 14:43 IST
Last Updated 13 ಅಕ್ಟೋಬರ್ 2024, 14:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಏರೋಸ್ಪೇಸ್‌ ಸ್ಟಾರ್ಟ್‌ಅಪ್‌ ಕಂಪನಿಯಾದ ಸ್ಪೇಸ್‌ ಕಿಡ್ಜ್‌ ಇಂಡಿಯಾವು ‘ಶಕ್ತಿಸ್ಯಾಟ್‌’ ಮಿಷನ್‌ನಡಿ 108 ದೇಶಗಳ ಒಟ್ಟು 12 ಸಾವಿರ ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಕುರಿತು ತರಬೇತಿ ನೀಡಲು ನಿರ್ಧರಿಸಿದೆ.

ಇಸ್ರೊದ ಚಂದ್ರಯಾನ–4 ಮಿಷನ್‌ ಭಾಗವಾಗಿ ಅಂತರಿಕ್ಷಕ್ಕೆ ಉಪಗ್ರಹ ಉಡ್ಡಯನ ಮಾಡುವ ಗುರಿ ಹೊಂದಿದೆ. ಆ ಮೂಲಕ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ಬಲಪಡಿಸಲು ತೀರ್ಮಾನಿಸಿದೆ.

ನವೆಂಬರ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ‘ಶಕ್ತಿಸ್ಯಾಟ್‌’ಗೆ ಚಾಲನೆ ನೀಡಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ADVERTISEMENT

‘ಈ ತರಬೇತಿ ಅವಧಿಯು 120 ಗಂಟೆ. 14ರಿಂದ 18ರ ವಯೋಮಾನದ ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ತಂತ್ರಜ್ಞಾನ, ಪೆಲೋಡ್‌ಗಳ ಅಭಿವೃದ್ಧಿ ಮತ್ತು ಸ್ಪೇಸ್‌ಕ್ರಾಫ್ಟ್‌ ಸಿಸ್ಟಮ್ಸ್ ಸೇರಿ ವಿವಿಧ ತರಬೇತಿ ನೀಡಲಾಗುವುದು’ ಎಂದು ಶಕ್ತಿಸ್ಯಾಟ್‌ ಮಿಷನ್‌ ಮುಖ್ಯಸ್ಥೆ ಶ್ರೀಮತಿ ಕೇಸನ್‌ ಪಿಟಿಐಗೆ ತಿಳಿಸಿದ್ದಾರೆ. 

‘ಬ್ರಿಟನ್‌, ಯುಎಇ, ಬ್ರೆಜಿಲ್‌, ಕೆನ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್‌, ಗ್ರೀಸ್‌, ಶ್ರೀಲಂಕಾ,  ಅಫ್ಗಾನಿಸ್ತಾನ ಸೇರಿ ಹಲವು ದೇಶಗಳ ಹೆಣ್ಣುಮಕ್ಕಳು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.