ಬೆಂಗಳೂರು: ಸರ್ಕಾರಿ ಸ್ವಾಮ್ಯದ, ರಕ್ಷಣಾ ಕ್ಷೇತ್ರದ ಉದ್ಯಮವಾಗಿರುವ ಬಿಇಎಂಎಲ್ ಲಿಮಿಟೆಡ್ನ ಗಣಿಗಾರಿಕೆ ಹಾಗೂ ನಿರ್ಮಾಣ ವಹಿವಾಟುಗಳ ನಿರ್ದೇಶಕರಾಗಿ ಶಂತನು ರಾಯ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಕಂಪನಿಯ ಆಡಳಿತ ಮಂಡಳಿಗೆ ಕೂಡ ನಾಮನಿರ್ದೇಶಿತರಾಗಿದ್ದಾರೆ.
ಈ ಹುದ್ದೆಗೆ ಬರುವ ಮೊದಲು ರಾಯ್ ಅವರು ಕಂಪನಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ರಾಯ್ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರ, ಹಣಕಾಸು ನಿರ್ವಹಣೆಯಲ್ಲಿ ಎಂಬಿಎ ಪದವಿ ಕೂಡ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.