ನವದೆಹಲಿ : ಕೆಫೆ ಡೇ ಗ್ರೂಪ್‌ಗೆ ಸೇರಿರುವ ಸಿಕ್ಯಾಲ್ ಲಾಜಿಸ್ಟಿಕ್ಸ್ ತನ್ನ ವಿವಿಧ ವಹಿವಾಟುಗಳನ್ನು ಮಾರಾಟ ಮಾಡಲು ಷೇರುದಾರರ ಸಮ್ಮತಿ ಕೇಳಿದೆ.
ಸಾಲ ಮರುಪಾವತಿಸಲು ಮತ್ತು ಕಂಪನಿಯ ಪ್ರಮುಖ ವಹಿವಾಟನ್ನು ಸರಾಗವಾಗಿ ಮುನ್ನಡೆಸಿಕೊಂಡು ಹೋಗಲು ಕಂಪನಿಯ ಮತ್ತು ಅಂಗಸಂಸ್ಥೆಗಳಿಗೆ ಸೇರಿದ ಕೆಲ ಸಂಪತ್ತು ಮಾರಾಟ ಮಾಡಿ ಸಾಲದ ಹೊರೆ ತಗ್ಗಿಸಲು ನಿರ್ದೇಶಕ ಮಂಡಳಿಯು ಆಗಸ್ಟ್ ತಿಂಗಳಲ್ಲಿ ಸಮ್ಮತಿ ನೀಡಿತ್ತು.
ಕಂಪನಿಯ ಒಡೆತನದಲ್ಲಿ ಇರುವ ವಹಿವಾಟನ್ನು ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಷೇರುದಾರರಿಗೆ ಮನವಿ ಮಾಡಿಕೊಂಡಿದೆ. ಸೂಕ್ತ ಖರೀದಿದಾರರನ್ನು ಗುರುತಿಸಲು ಕಂಪನಿಯ ಷೇರುದಾರರ ಅನುಮತಿ ಪಡೆಯಲಾಗುತ್ತಿದೆ ಎಂದು ಸಿಕ್ಯಾಲ್ ಲಾಜಿಸ್ಟಿಕ್ಸ್, ಮುಂಬೈ ಷೇರುಪೇಟೆಗೆ ತಿಳಿಸಿದೆ.
ತನ್ನ ವಿವಿಧ ವಹಿವಾಟು ಘಟಕಗಳನ್ನು ಮತ್ತು ಅಂಗಸಂಸ್ಥೆಗಳಲ್ಲಿನ ಪಾಲು ಬಂಡವಾಳವನ್ನು ಮಾರಾಟ ಮಾಡಲು ಕಂಪನಿ ಉದ್ದೇಶಿಸಿದೆ. ಕಾಫಿ ಡೇ ಗ್ರೂಪ್, 2011ರಲ್ಲಿ ಸಿಕ್ಯಾಲ್ ಲಾಜಿಸ್ಟಿಕ್ಸ್ ಖರೀದಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.