ADVERTISEMENT

ಚಿನ್ನ, ಬೆಳ್ಳಿ ದರ ಏರಿಕೆ

ಕೆ.ಜಿ ಬೆಳ್ಳಿ ದರ ₹95,900

ಪಿಟಿಐ
Published 7 ಜೂನ್ 2024, 15:55 IST
Last Updated 7 ಜೂನ್ 2024, 15:55 IST
<div class="paragraphs"><p>ಚಿನ್ನ</p></div>

ಚಿನ್ನ

   

ನವದೆಹಲಿ: ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಆಗಿದೆ.

ಬೆಳ್ಳಿ ದರವು ಕೆ.ಜಿಗೆ ₹2,600 ಹೆಚ್ಚಳವಾಗಿ ₹95,900ರಂತೆ ಮಾರಾಟವಾಗಿದೆ. ಚಿನ್ನದ ಧಾರಣೆಯು 10 ಗ್ರಾಂ ಗೆ ₹150 ಏರಿಕೆಯಾಗಿದ್ದು, ₹73,650ಕ್ಕೆ ಮುಟ್ಟಿದೆ.

ADVERTISEMENT

‘ಅಮೆರಿಕದ ಡಾಲರ್‌ ಮೌಲ್ಯದಲ್ಲಿ ಇಳಿಕೆ ಮತ್ತು ಯುರೋಪ್‌ನ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಕಡಿತ ಮಾಡಿರುವುದರಿಂದ ಹಳದಿ ಲೋಹದ ಬೆಲೆಯಲ್ಲಿ ಏರಿಕೆಯಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,366 ಡಾಲರ್‌ (ಅಂದಾಜು ₹1.97 ಲಕ್ಷ) ಮತ್ತು 31.05 ಡಾಲರ್‌ನಂತೆ (ಅಂದಾಜು ₹2,592) ಮಾರಾಟ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.