ADVERTISEMENT

ಕೆ.ಜಿ. ಬೆಳ್ಳಿಗೆ ₹1 ಲಕ್ಷ: 10 ಗ್ರಾಂ ಅಪರಂಜಿ ಚಿನ್ನಕ್ಕೆ ₹81 ಸಾವಿರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:33 IST
Last Updated 22 ಅಕ್ಟೋಬರ್ 2024, 14:33 IST
ಆಭರಣ
ಆಭರಣ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಕೆ.ಜಿಗೆ ₹1 ಲಕ್ಷ ದಾಟಿದೆ.

10 ಗ್ರಾಂ ಚಿನ್ನದ ದರವು ₹350 ಏರಿಕೆಯಾಗಿ, ₹81 ಸಾವಿರದಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1,500 ಹೆಚ್ಚಳವಾಗಿ ₹1.01 ಲಕ್ಷಕ್ಕೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್ ತಿಳಿಸಿದೆ.

ಬೆಳ್ಳಿಯು ವಿದ್ಯುತ್‌ ಹಾಗೂ ಶಾಖದ ಅತ್ಯುತ್ತಮ ವಾಹಕವಾಗಿದೆ. ಎಲೆಕ್ಟ್ರಾನಿಕ್ಸ್‌, ಸರ್ಕಿಟ್‌ ಬೋರ್ಡ್‌, ಸೌರ ಫಲಕ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕೈಗಾರಿಕಾ ವಲಯದಿಂದ ಬೇಡಿಕೆ ಹೆಚ್ಚಳವಾಗಿದೆ. ಹಾಗಾಗಿ, ಸತತ ಐದು ದಿನದಿಂದ ಬೆಳ್ಳಿ ಧಾರಣೆಯಲ್ಲಿ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.