ADVERTISEMENT

ಮ್ಯೂಚುವಲ್ ಫಂಡ್ 'ಸಿಪ್'‌ ಹೂಡಿಕೆಯಲ್ಲಿ ಇಳಿಕೆ

ಪಿಟಿಐ
Published 13 ಆಗಸ್ಟ್ 2020, 16:02 IST
Last Updated 13 ಆಗಸ್ಟ್ 2020, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮ್ಯೂಚುವಲ್‌ ಫಂಡ್‌ ಕಂಪನಿಗಳು ವ್ಯವಸ್ಥಿತ ಹೂಡಿಕೆ ಯೋಜನೆಯ (ಎಸ್‌ಐಪಿ‌) ಮೂಲಕ ಜುಲೈನಲ್ಲಿ ಸಂಗ್ರಹಿಸಿರುವ ಬಂಡವಾಳವು 22 ತಿಂಗಳುಗಳಲ್ಲೇ ಕನಿಷ್ಠ ಮೊತ್ತವಾಗಿದೆ ಎಂದು ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ ಹೇಳಿದೆ.

ಜುಲೈನಲ್ಲಿ ಎಸ್‌ಐಪಿ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ₹ 7,831 ಕೋಟಿ ಹೂಡಿಕೆಯಾಗಿದೆ. ‌2018ರ ಸೆಪ್ಟೆಂಬರ್‌ ನಂತರದ (₹ 7,727 ಕೋಟಿ) ಕನಿಷ್ಠ ಮೊತ್ತದ ಹೂಡಿಕೆ ಇದಾಗಿದೆ.

ಏಪ್ರಿಲ್‌ ತಿಂಗಳಿನಿಂದಲೂ ಎಸ್‌ಐಪಿ‌ ಮೂಲಕ ಹೂಡಿಕೆಯು ಕಡಿಮೆಯಾಗುತ್ತಲೇ ಇದೆ. ಹೀಗಿದ್ದರೂಮಾರುಕಟ್ಟೆಯ ಅಪಾಯಗಳಿಂದ ತಪ್ಪಿಸಿಕೊಳ್ಳಲು ಸಣ್ಣ ಹೂಡಿಕೆದಾರರಿಗೆ ‘ಎಸ್‌ಐಪಿ‌’ ಪ್ರಮುಖ ಮಾರ್ಗವಾಗಿಯೇ ಮುಂದುವರಿಯಲಿದೆ ಎಂದು ಒಕ್ಕೂಟ ಹೇಳಿದೆ. ಆರ್ಥಿಕ ಸ್ಥಿತಿ ಸುಧಾರಣೆ ಕಂಡ ಬಳಿಕ ಎಸ್‌ಐಪಿ‌ ಮೂಲಕ ಹೂಡಿಕೆಯು ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸದ್ಯ, ಮ್ಯೂಚುವಲ್‌ ಫಂಡ್‌ಗಳಲ್ಲಿ ಒಟ್ಟು 3.27 ಕೋಟಿ ಎಸ್ಐಪಿ‌ ಖಾತೆಗಳಿವೆ. 2019–20ರಲ್ಲಿ ಎಸ್‌ಐಪಿ‌ ಮೂಲಕ ₹ 1 ಲಕ್ಷ ಕೋಟಿ ಹೂಡಿಕೆ ಆಗಿತ್ತು.

ಹೂಡಿಕೆ ವಿವರ (ಕೋಟಿಗಳಲ್ಲಿ)

ಏಪ್ರಿಲ್‌-₹ 8,641

ಮೇ-₹ 8,376

ಜೂನ್-; ₹ 7,917

ಜುಲೈ-₹ 7,831

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.