ADVERTISEMENT

ಎಸ್‌ಐಪಿ ಹೂಡಿಕೆ 31 ತಿಂಗಳ ಕನಿಷ್ಠ

ಪಿಟಿಐ
Published 15 ಡಿಸೆಂಬರ್ 2020, 17:21 IST
Last Updated 15 ಡಿಸೆಂಬರ್ 2020, 17:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ)ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ನವೆಂಬರ್‌ನಲ್ಲಿ ₹ 7,302 ಕೋಟಿ ಹೂಡಿಕೆ ಆಗಿದ್ದು, ಇದು 31 ತಿಂಗಳ ಕನಿಷ್ಠ ಮಟ್ಟವಾಗಿದೆ.

2018ರ ಏಪ್ರಿಲ್‌ನಲ್ಲಿ ₹ 6,690 ಕೋಟಿ ಹೂಡಿಕೆ ಆಗಿತ್ತು. ಆ ಬಳಿಕ ಆಗಿರುವ ಕನಿಷ್ಠ ಮಟ್ಟದ ಹೂಡಿಕೆ ಇದಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ಆರು ತಿಂಗಳ ನಿರಂತರ ಇಳಿಕೆಯ ಬಳಿಕ ಅಕ್ಟೋಬರ್‌ನಲ್ಲಿ ಎಸ್‌ಐಪಿ ಮೂಲಕ ಆಗುವ ಹೂಡಿಕೆಯಲ್ಲಿ ಏರಿಕೆ ಕಂಡುಬಂದಿತ್ತು. ಆದರೆ ನವೆಂಬರ್‌ನಲ್ಲಿ ಮತ್ತೆ ಇಳಿಕೆಯ ಹಾದಿ ಹಿಡಿದಿದೆ.

ADVERTISEMENT

ಸದ್ಯದ ಪರಿಸ್ಥಿತಿಯಲ್ಲಿ ಹೂಡಿಕೆದಾರರು ತಮ್ಮ ಬಳಿ ತುಸು ನಗದನ್ನು ಇಟ್ಟುಕೊಳ್ಳಲು ಬಯಸುತ್ತಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ಎಸ್‌ಐಪಿ ಮೂಲಕ ಆಗುವ ಹೂಡಿಕೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ನವೆಂಬರ್‌ನಲ್ಲಿ 3.39 ಲಕ್ಷ ಹೊಸ ಎಸ್‌ಐಪಿ ಖಾತೆಗಳು ಸೇರ್ಪಡೆ ಆಗಿವೆ. ಇದರಿಂದ ಒಟ್ಟಾರೆ ಎಸ್‌ಐಪಿ ಖಾತೆಗಳ ಸಂಖ್ಯೆ 3.41 ಕೋಟಿಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.