ನವದೆಹಲಿ: ವಿದೇಶಿ ಕರೆನ್ಸಿಗಳ ರೂಪದಲ್ಲಿ ಸಾಗರೋತ್ತರ ಸಾಲ ಪಡೆಯುವ ಬಗ್ಗೆ ಮರು ಚಿಂತನೆ ನಡೆಸುವ ಸಾಧ್ಯತೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಳ್ಳಿ ಹಾಕಿದ್ದಾರೆ.
‘ವಿದೇಶಿ ಬಾಂಡ್‌ಗಳ ಮೂಲಕ ಸಾಲ ಸಂಗ್ರಹಿಸುವ ಆಲೋಚನೆ ಬಗ್ಗೆ ಪರಾಮರ್ಶೆ ನಡೆಸಲು ನಾನು ಯಾರೊಬ್ಬರನ್ನೂ ಕೇಳಿಕೊಂಡಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಈ ನಿಟ್ಟಿನಲ್ಲಿ ಮುಂದುವರೆಯಲಾಗುವುದು’ ಎಂದು ಅವರು ‘ಇಕನಾಮಿಕ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿದೇಶಿ ಬಾಂಡ್‌ಗಳಿಗೆ ರಾಜಕೀಯ ಮತ್ತು ಆರ್ಥಿಕ ವಲಯಗಳಲ್ಲಿ ಆಕ್ಷೇಪ ವ್ಯಕ್ತವಾಗಿರುವುದರಿಂದ ಈ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಪ್ರಧಾನಿ ಕಚೇರಿಯು ಆದೇಶಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ನಿರ್ಮಲಾ ಅಲ್ಲಗಳೆದಿದ್ದಾರೆ.
‘ವಿದೇಶಿ ಬಾಂಡ್‌ಗಳಿಂದ ಸಂಗ್ರಹಿಸಬಹುದಾದ ಮೊತ್ತ, ಬಾಂಡ್ ಬಿಡುಗಡೆ ಸಮಯ ಮತ್ತಿತರ ವಿವರಗಳನ್ನು ಇನ್ನೂ ಅಂತಿಮ
ಗೊಳಿಸಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.