ADVERTISEMENT

ಚಿನ್ನದ ಬಾಂಡ್‌: 2021–22ರ ಮೊದಲ ಕಂತು ಮೇ 17ರಿಂದ

ಪಿಟಿಐ
Published 13 ಮೇ 2021, 14:11 IST
Last Updated 13 ಮೇ 2021, 14:11 IST
‍ಪ್ರಾತಿನಿಧಿಕ ಚಿತ್ರ
‍ಪ್ರಾತಿನಿಧಿಕ ಚಿತ್ರ   

ನವದೆಹಲಿ: ಚಿನ್ನದ ಬಾಂಡ್‌ನ 2021–22ನೇ ಸಾಲಿನ ಮೊದಲ ಕಂತು ಸೋಮವಾರದಿಂದ (ಮೇ 17) ಆರಂಭವಾಗಲಿದ್ದು, 21ಕ್ಕೆ ಮುಕ್ತಾಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಮೇ 25ರಂದು ಬಾಂಡ್‌ ವಿತರಣೆ ಆಗಲಿದೆ. ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಒಟ್ಟು ಆರು ಕಂತುಗಳಲ್ಲಿ ಚಿನ್ನದ ಬಾಂಡ್ ವಿತರಣೆ ನಡೆಯಲಿದೆ ಎಂದು ಹೇಳಿದೆ.

ಬ್ಯಾಂಕುಗಳು (ಕಿರು ಹಣಕಾಸು ಬ್ಯಾಂಕ್ ಮತ್ತು ಪೇಮೆಂಟ್‌ ಬ್ಯಾಕ್ಸ್‌ ಹೊರತುಪಡಿಸಿ), ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಅಂಚೆ ಕಚೇರಿ, ಬಿಎಸ್‌ಇ ಮತ್ತು ಎನ್‌ಎಸ್ಇ ಮೂಲಕ ಚಿನ್ನದ ಬಾಂಡ್‌ ಮಾರಾಟ ನಡೆಯಲಿದೆ.

ADVERTISEMENT

ಕನಿಷ್ಠ ಹೂಡಿಕೆ 1 ಗ್ರಾಂ ಇರಲಿದೆ ಎಂದು ಸಚಿವಾಲಯವು ತಿಳಿಸಿದೆ. ಪ್ರಕಟಣೆಯ ಪ್ರಕಾರ, ವೈಯಕ್ತಿಕ ಖರೀದಿದಾರರಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆ.ಜಿ ಹಾಗೂ ಟ್ರಸ್ಟ್‌ಗಳಿಗೆ 20 ಕೆ.ಜಿಯ ಗರಿಷ್ಠ ಮಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.