ADVERTISEMENT

ಸೋಯಾಬಿನ್‌ ಉತ್ಪಾದನೆ ಹೆಚ್ಚಳ

ಪಿಟಿಐ
Published 15 ಅಕ್ಟೋಬರ್ 2024, 14:19 IST
Last Updated 15 ಅಕ್ಟೋಬರ್ 2024, 14:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇಂದೋರ್: ದೇಶದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಸೋಯಾಬಿನ್‌ ಉತ್ಪಾದನೆಯು ಶೇ 6ರಷ್ಟು ಹೆಚ್ಚಳವಾಗಿದ್ದು, ಒಟ್ಟು 126 ಲಕ್ಷ ಟನ್‌ ಆಗಿದೆ ಎಂದು ಸೋಯಾಬಿನ್‌ ಎಣ್ಣೆ ಉತ್ಪಾದಕರ ಸಂಘ (ಎಸ್‌ಒಪಿಎ) ಮಂಗಳವಾರ ತಿಳಿಸಿದೆ.

ಮುಂಗಾರಿನಲ್ಲಿ ಸೋಯಾಬಿನ್‌ ಫಸಲಿಗೆ ಪೂರಕವಾದ ವಾತಾವರಣವಿತ್ತು. ಇದೇ ಉತ್ಪಾದನೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದೆ.

ಕಳೆದ ವರ್ಷದ ಮುಂಗಾರಿನಲ್ಲಿ ಪ್ರತಿ ಹೆಕ್ಟೇರ್‌ಗೆ ಸರಾಸರಿ ಉತ್ಪಾದನೆಯು 1,002 ಕೆ.ಜಿ ಇತ್ತು. ಈ ಬಾರಿಗೆ 1,063 ಕೆ.ಜಿಗೆ ಹೆಚ್ಚಳವಾಗಿದೆ ಎಂದು ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕ ಡಿ.ಎನ್‌. ಪಾಠಕ್‌ ಅವರು, ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

‘ಸೋಯಾಬಿನ್‌ ಬೆಳೆಯುವ ಪ್ರದೇಶಗಳಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯಿತು. ಇದು ಇಳುವರಿ ಹೆಚ್ಚಳಕ್ಕೆ ನೆರವಾಗಿದೆ. ಅಲ್ಲದೆ, ಕೃಷಿಯಲ್ಲಿ ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು ಕೂಡ ವರದಾನವಾಗಿದೆ’ ಎಂದು ವಿವರಿಸಿದ್ದಾರೆ.

ಕಳೆದ ವರ್ಷದ ಮುಂಗಾರಿನಲ್ಲಿ ದೇಶದ 118.55 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾಬಿನ್‌ ಬಿತ್ತನೆಯಾಗಿತ್ತು. ಒಟ್ಟು 118.74 ಲಕ್ಷ ಟನ್‌ ಉತ್ಪಾದನೆಯಾಗಿತ್ತು. ಈ ಬಾರಿ 118.32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. 

ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಸೋಯಾಬಿನ್‌ ಉತ್ಪಾದಿಸಲಾಗುತ್ತದೆ. ಆ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ರಾಜಸ್ಥಾನ ಇವೆ. 

2024–25ನೇ ಮಾರುಕಟ್ಟೆ ವರ್ಷದಲ್ಲಿ ಕೇಂದ್ರ ಸರ್ಕಾರವು ಸೋಯಾಬಿನ್‌ನ ಪ್ರತಿ ಕ್ವಿಂಟಲ್‌ಗೆ ₹4,892 ಬೆಂಬಲ ಬೆಲೆ ನಿಗದಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.