ನವದೆಹಲಿ: ಮುಂದಿನ ಎರಡು ಹಣಕಾಸು ವರ್ಷದ ದೇಶದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆ ಸೋಮವಾರ ಪರಿಷ್ಕರಿಸಿದೆ.
2025–26ರ ಹಣಕಾಸು ವರ್ಷದಲ್ಲಿ ಶೇ 6.7 ಮತ್ತು 2026–27ರಲ್ಲಿ ಶೇ 6.8ರಷ್ಟಾಗಲಿದೆ ಎಂದು ಹೇಳಿದೆ. ಈ ಮೊದಲು ಕ್ರಮವಾಗಿ ಶೇ 6.9 ಮತ್ತು ಶೇ 7ರಷ್ಟು ಎಂದು ಹೇಳಿತ್ತು. ಮೊದಲ ಅಂದಾಜಿನ ಪ್ರಮಾಣಕ್ಕಿಂತ ಈಗ ಕಡಿಮೆಯಾಗಿದೆ. ಆದರೆ, 2027–28ರಲ್ಲಿ ಶೇ 7ರಷ್ಟು ಆರ್ಥಿಕ ಬೆಳವಣಿಗೆ ಆಗಲಿದೆ ಎಂದು ಅಂದಾಜಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.8ರಷ್ಟು ಬೆಳವಣಿಗೆ ನಿರೀಕ್ಷೆ ಇದೆ. ಬಡ್ಡಿ ದರ ಹೆಚ್ಚಿರುವುದು ಮತ್ತು ನಗರ ಪ್ರದೇಶದಲ್ಲಿ ಬೇಡಿಕೆ ಪ್ರಮಾಣ ಕಡಿಮೆಯಾಗಿರುವುದರಿಂದ ಪರಿಷ್ಕರಣೆ ಮಾಡಲಾಗಿದೆ. ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ವಿಸ್ತರಣೆಯ ವಲಯದಲ್ಲಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತಯಾರಿಕಾ ವಲಯದ ಚಟುವಟಿಕೆ ಕಡಿಮೆಯಾಗಿರುವುದರಿಂದ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದೆ.
ಚೀನಾದ ಬೆಳವಣಿಗೆ 2024ರಲ್ಲಿ ಶೇ 4.8, 2025ರಲ್ಲಿ ಶೇ 4.1 ಮತ್ತು 2026ರಲ್ಲಿ ಶೇ 3.8ರಷ್ಟಾಗಲಿದೆ ಎಂದು ನಿರೀಕ್ಷಿಸಿರುವುದಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.