ನವದೆಹಲಿ: ಮುಂದಿನ ಮೂರು ಹಣಕಾಸು ವರ್ಷಗಳಲ್ಲಿ ದೇಶದ ಆರ್ಥಿಕತೆ ಬೆಳವಣಿಗೆಯು ಶೇ 6.5 ರಿಂದ ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆ ಅಂದಾಜಿಸಿದೆ.
ದೇಶದಲ್ಲಿ ಮೂಲಸೌಕರ್ಯ ವಲಯ ಮತ್ತು ಖಾಸಗಿ ಬಳಕೆಯ ವೆಚ್ಚ ಹೆಚ್ಚಳವಾಗಿದೆ. ಇದು ಸದೃಢ ಆರ್ಥಿಕ ಬೆಳವಣಿಗೆಗೆ ನೆರವು ನೀಡುತ್ತಿದೆ. ಉತ್ತಮ ಆರ್ಥಿಕ ಪ್ರಗತಿಯ ಅಂಶವು ಬ್ಯಾಂಕ್‌ನ ಆಸ್ತಿ ಗುಣಮಟ್ಟವನ್ನು ನಿರಂತರವಾಗಿ ಬೆಂಬಲಿಸಲಿದೆ. ಆರೋಗ್ಯಕರ ಜಮಾ–ಖರ್ಚು ಪಟ್ಟಿ (ಬ್ಯಾಲೆನ್ಸ್‌ಶೀಟ್), ಸಾಲದ ನಿಯಮಗಳನ್ನು ಬಿಗಿಗೊಳಿಸುವಿಕೆ ಮತ್ತು ಅಪಾಯ ನಿರ್ವಹಣೆಯು ಸುಧಾರಿಸಲಿದೆ’ ಎಂದು ಗುರುವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.
ರಚನಾತ್ಮಕ ಸುಧಾರಣೆ ಮತ್ತು ಉತ್ತಮ ಆರ್ಥಿಕ ಅಂಶಗಳು ದೇಶದ ಹಣಕಾಸು ಸಂಸ್ಥೆಗಳ ಚೇತರಿಕೆಗೆ ನೆರವು ನೀಡಲಿವೆ. ಇದರಿಂದ 2024–25, 2025–26 ಮತ್ತು 2026–27ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆಯು ವಾರ್ಷಿಕ ಶೇ 6.5 ರಿಂದ ಶೇ 7ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.