ADVERTISEMENT

ದೇಶದ ಜಿಡಿಪಿ ಪ್ರಗತಿ ಶೇ 6.8: ಎಸ್‌ ಆ್ಯಂಡ್ ಪಿ

ಪಿಟಿಐ
Published 24 ಜೂನ್ 2024, 14:15 IST
Last Updated 24 ಜೂನ್ 2024, 14:15 IST
<div class="paragraphs"><p>ಜಿಡಿಪಿ</p></div>

ಜಿಡಿಪಿ

   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 6.8ರಲ್ಲಿಯೇ ಇರಲಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆ ಸೋಮವಾರ ಅಂದಾಜಿಸಿದೆ.

ಬಡ್ಡಿ ದರ ಹೆಚ್ಚಿನ ಮಟ್ಟದಲ್ಲಿ ಇರುವುದು ಮತ್ತು ಕೃಷಿಯೇತರ ವಲಯದಲ್ಲಿ ಬೇಡಿಕೆ ಕಡಿಮೆ ಇರುವ ಕಾರಣದಿಂದಾಗಿ ಜಿಡಿಪಿ ಬೆಳವಣಿಗೆಯು ಮಂದಗತಿಯಲ್ಲಿ ಇರಲಿದ್ದು, ಶೇ 6.8ರಷ್ಟು ಬೆಳವಣಿಗೆ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ.

ADVERTISEMENT

2025–26 ಮತ್ತು 2026–27ನೆಯ ಹಣಕಾಸು ವರ್ಷದಲ್ಲಿ ಕ್ರಮವಾಗಿ ಶೇ 6.9 ಮತ್ತು ಶೇ 7ರಷ್ಟು ಆರ್ಥಿಕ ಬೆಳವಣಿಗೆ ಆಗಲಿದೆ ಎಂದು ಅದು ಅಂದಾಜಿಸಿದೆ.

ಎಸ್‌ ಆ್ಯಂಡ್‌ ಪಿ ಅಂದಾಜು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜಿಸಿರುವ ಶೇ 7.2ಕ್ಕಿಂತಲೂ ಕಡಿಮೆ ಇದೆ.

ಫಿಚ್‌ ರೇಟಿಂಗ್ಸ್‌ ಶೇ 7.2, ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್ (ಎಡಿಬಿ) ಶೇ 7, ಮೂಡೀಸ್‌ ಮತ್ತು ಡೆಲಾಯ್ಟ್ ಇಂಡಿಯಾ ಶೇ 6.6ರಷ್ಟು, ಮೋರ್ಗನ್‌ ಸ್ಟ್ಯಾನ್ಲಿ ಶೇ 6.8ರಷ್ಟು ಭಾರತದ ಜಿಡಿಪಿ ಬೆಳವಣಿಗೆ 2024–25ರಲ್ಲಿ ಇರಲಿದೆ ಎಂದು ಅಂದಾಜಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.