ADVERTISEMENT

5ಜಿ ತರಂಗಾಂತರ ಹರಾಜು: ಕೇಂದ್ರ ಸರ್ಕಾರದ ನಿರೀಕ್ಷೆ ಠುಸ್‌

ನಿರೀಕ್ಷೆ ₹96,238 ಕೋಟಿ, ಸಂಗ್ರಹ ₹11 ಸಾವಿರ ಕೋಟಿ

ಪಿಟಿಐ
Published 26 ಜೂನ್ 2024, 22:59 IST
Last Updated 26 ಜೂನ್ 2024, 22:59 IST
,,,,,,
,,,,,,   

ನವದೆಹಲಿ: 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ₹11,340 ಕೋಟಿ ಸಂಗ್ರಹವಾಗಿದ್ದು, ಕೇಂದ್ರ ಸರ್ಕಾರ ನಿರೀಕ್ಷೆ ಮಾಡಿದ್ದಕ್ಕಿಂತಲೂ ಇದು ಕಡಿಮೆ ಮೊತ್ತವಾಗಿದೆ.

‘800 ಮೆಗಾ ಹರ್ಟ್ಜ್‌ನಿಂದ 26 ಗಿಗಾ ಹರ್ಟ್ಜ್ ತರಂಗಾಂತರ ಬ್ಯಾಂಡ್‌ಗಳ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಒಟ್ಟು ₹96,238 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ ಶೇ 12ರಷ್ಟು ಮೊತ್ತವಷ್ಟೇ ಸಂಗ್ರಹವಾಗಿದೆ’ ಎಂದು ಸರ್ಕಾರ ತಿಳಿಸಿದೆ. ‌ 

ಮೊದಲ ದಿನವಾದ ಮಂಗಳವಾರ ಐದು ಸುತ್ತಿನಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು. ಎರಡನೇ ದಿನವಾದ ಬುಧವಾರ ಕಂಪನಿಗಳಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಹಾಗಾಗಿ, ಅಧಿಕಾರಿಗಳು ಮಧ್ಯಾಹ್ನದ ವೇಳೆಗೆ ಹರಾಜು ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದರು. 

ADVERTISEMENT

ಭಾರ್ತಿ ಏರ್‌ಟೆಲ್‌ ಮುಂಚೂಣಿ:

ಭಾರ್ತಿ ಏರ್‌ಟೆಲ್‌ ಕಂಪನಿಯು ಒಟ್ಟು ₹6,857 ಕೋಟಿ ಮೌಲ್ಯದ ತರಂಗಾಂತರಗಳನ್ನು ಖರೀದಿಸಿದೆ. ಒಟ್ಟು ಮಾರಾಟವಾಗಿರುವ ತರಂಗಾಂತರಗಳಲ್ಲಿ ಈ ಕಂಪನಿಯ ಪಾಲು ಶೇ 60ರಷ್ಟಿದೆ. 

‘ಕಂಪನಿಯ ಅಂಗಸಂಸ್ಥೆಯಾದ ಭಾರ್ತಿ ಹೆಕ್ಸಕಾಂ ₹1,000 ಕೋಟಿ ಮೌಲ್ಯದ 15 ಮೆಗಾ ಹರ್ಟ್ಜ್ ತರಂಗಾಂತರ ಖರೀದಿಸಿದೆ’ ಎಂದು ಭಾರ್ತಿ ಏರ್‌ಟೆಲ್‌ ತಿಳಿಸಿದೆ.

900 ಮೆಗಾ ಹರ್ಟ್ಜ್, 1,800 ಮೆಗಾ ಹರ್ಟ್ಜ್ ಹಾಗೂ 2,100 ಮೆಗಾ ಹರ್ಟ್ಜ್ ಬ್ಯಾಂಡ್‌ಗಳಿಂದ ಒಟ್ಟು 97 ಮೆಗಾ ಹರ್ಟ್ಜ್ ತರಂಗಾಂತರ ಖರೀದಿಸಲಾಗಿದೆ ಎಂದು ಹೇಳಿದೆ.

‘ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ಕಂಪನಿಯ ಗುರಿಯಾಗಿದೆ. ಇದಕ್ಕೆ ಅನುಗುಣವಾಗಿ ತರಂಗಾಂತರಗಳನ್ನು ಖರೀದಿಸಲಾಗಿದೆ. ಇದರಿಂದ ಕಂಪನಿ ಹೊಂದಿರುವ ಸಬ್‌ ಗಿಗಾ ಹರ್ಟ್ಜ್ ಹಾಗೂ ಮಿಡ್‌ ಬ್ಯಾಂಡ್‌ ಸೇವೆಯ ಬಲವರ್ಧನೆಗೆ ಸಹಕಾರಿಯಾಗಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೋಪಾಲ್‌ ವಿಟ್ಟಲ್‌ ತಿಳಿಸಿದ್ದಾರೆ.

ರಿಲಯನ್ಸ್‌ ಜಿಯೊ ₹973 ಕೋಟಿ ಹಾಗೂ ವೊಡಾಫೋನ್ ಐಡಿಯಾ ಕಂಪನಿಯು ₹3,510 ಕೋಟಿ ಮೌಲ್ಯದ ತರಂಗಾಂತರಗಳನ್ನು ಖರೀದಿಸಿದೆ.

ಕೇಂದ್ರವು 2022ರಲ್ಲಿ ಏಳು ದಿನ ಹರಾಜು ಪ್ರಕ್ರಿಯೆ ನಡೆಸಿ ಒಟ್ಟು ₹1.5 ಲಕ್ಷ ಕೋಟಿ 2022ರಲ್ಲಿ ತರಂಗಾಂತರ ಹರಾಜಿನಿಂದ ಸಂಗ್ರಹವಾದ ಮೊತ್ತ ₹88,078 ಕೋಟಿ ಜಿಯೊ ಕಂಪನಿಯು ಅತಿ ಹೆಚ್ಚಿನ ಮೊತ್ತ ವ್ಯಯ ಮಾಡಿತ್ತು ₹43,084 ಕೋಟಿ ಭಾರ್ತಿ ಏರ್‌ಟೆಲ್‌ ಖರೀದಿಸಿದ ತರಂಗಾಂತರಗಳ ಮೌಲ್ಯ ₹18,799 ಕೋಟಿ ವೊಡಾಫೋನ್ ಐಡಿಯಾ ಕಂಪನಿ ವ್ಯಯ ಮಾಡಿದ್ದ ಮೊತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.