ಮುಂಬೈ: ಸ್ಪೈಸ್‌ಜೆಟ್ ಕಂಪನಿಯು ಬಂಡವಾಳ ಸಂಗ್ರಹಿಸಲು ಇರುವ ಆಯ್ಕೆಗಳನ್ನು ಪರಿಶೀಲಿಸಲು ಡಿಸೆಂಬರ್ 11ರಂದು ನಿರ್ದೇಶಕರ ಮಂಡಳಿ ಸಭೆ ನಡೆಸಲಿದೆ.
ಪ್ರವರ್ತಕ ಅಜಯ್ ಸಿಂಗ್ ಅವರು ₹ 833 ಕೋಟಿ ಬಂಡವಾಳ ಸಂಗ್ರಹಿಸಲು ಜಾಗತಿಕ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ವರದಿಗಳ ಬೆನ್ನಲ್ಲೇ ಕಂಪನಿಯು ಈ ಹೇಳಿಕೆ ನೀಡಿದೆ.
ಈಕ್ವಿಟಿ ಷೇರುಗಳು ಅಥವಾ ಪರಿವರ್ತಿಸಬಹುದಾದ ಸಾಲಪತ್ರಗಳನ್ನು ನೀಡುವ ಮೂಲಕ ಬಂಡವಾಳ ಸಂಗ್ರಹಿಸುವ ಆಯ್ಕೆಗಳನ್ನು ನಿರ್ದೇಶಕರ ಮಂಡಳಿಯು ಚರ್ಚೆ ನಡೆಸಲಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.