ADVERTISEMENT

ವೈರಸ್ ದಾಳಿ ಶಂಕೆ: ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2022, 6:34 IST
Last Updated 25 ಮೇ 2022, 6:34 IST
   

ಬೆಂಗಳೂರು: ಸ್ಪೈಸ್‌ಜೆಟ್ ವಿಮಾನಗಳ ಸೇವೆಯಲ್ಲಿ ಬುಧವಾರ ಬೆಳಗ್ಗೆ ವ್ಯತ್ಯಯ ಕಂಡುಬಂದಿದ್ದು, ಇದೊಂದು ವೈರಸ್ ದಾಳಿಯ ಯತ್ನವಾಗಿರಬಹುದು ಎಂದು ಸಂಸ್ಥೆ ಹೇಳಿದೆ.

ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿ ತೊಂದರೆಗೆ ಸಿಲುಕಿರುವ ಬಗ್ಗೆ ಪ್ರಯಾಣಿಕರು ಟ್ವೀಟ್ ಮಾಡಿ, ಸ್ಪೈಸ್‌ಜೆಟ್ ಸಂಸ್ಥೆಯ ಸ್ಪಷ್ಟನೆ ಕೇಳಿದ್ದರು.

ಪ್ರಯಾಣಿಕರು ಟ್ವೀಟ್ ಮಾಡಿ ಸಮಸ್ಯೆಯಾಗಿರುವ ಬಗ್ಗೆ ವಿವರಿಸುತ್ತಲೇ ಎಚ್ಚೆತ್ತುಕೊಂಡ ಸ್ಪೈಸ್‌ಜೆಟ್, ಇದೊಂದು ವೈರಸ್ ದಾಳಿಯ ಯತ್ನವಾಗಿರಬಹುದು. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈಗ ವಿಮಾನಯಾನ ಸೇವೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ಎಲ್ಲವೂ ಸರಿಯಾಗಿದೆ ಎಂದು ಉತ್ತರಿಸಿದೆ.

ADVERTISEMENT

ಆದರೆ, ಸ್ಪೈಸ್‌ಜೆಟ್ ಹೇಳಿಕೆ ಹೊರತಾಗಿಯೂ, ಬಹಳಷ್ಟು ಪ್ರಯಾಣಿಕರು ವಿಮಾನ ಸೇವೆ ಲಭ್ಯವಾಗುತ್ತಿಲ್ಲ. ಬೋರ್ಡಿಂಗ್ ಟಿಕೆಟ್ ಸಮಸ್ಯೆಯಾಗಿದೆ ಎಂದು ಟ್ವಿಟರ್‌ನಲ್ಲಿ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.