ADVERTISEMENT

ಪೈಲಟ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್‌

ಪಿಟಿಐ
Published 22 ಸೆಪ್ಟೆಂಬರ್ 2022, 11:22 IST
Last Updated 22 ಸೆಪ್ಟೆಂಬರ್ 2022, 11:22 IST
ಸ್ಪೈಸ್‌ಜೆಟ್
ಸ್ಪೈಸ್‌ಜೆಟ್   

ಮುಂಬೈ: ಸ್ಪೈಸ್‌ಜೆಟ್ ಕಂಪನಿಯು ತನ್ನ ಕ್ಯಾಪ್ಟನ್‌ ಹಾಗೂ ಹಿರಿಯ ಫಸ್ಟ್‌ ಆಫೀಸರ್‌ಗಳ ವೇತನವನ್ನು ಸರಿಸುಮಾರು ಶೇಕಡ 20ರಷ್ಟು ಹೆಚ್ಚಿಸಿದೆ. ಇದು ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ ರೂಪಿಸಿರುವ ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಕಂಪನಿಯು ಮೊದಲ ಕಂತಿನ ನೆರವನ್ನು ಪಡೆದಿದೆ.

ಕಂಪನಿಯು ಒಟ್ಟು 80 ಪೈಲಟ್‌ಗಳನ್ನು ಮೂರು ತಿಂಗಳ ಅವಧಿಗೆ ವೇತನ ರಹಿತ ರಜೆಯ ಮೇಲೆ ಕಳುಹಿಸಿದೆ. ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಕಂಪನಿಯು ಒಟ್ಟು ಅಂದಾಜು ₹ 225 ಕೋಟಿ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT