ನವದೆಹಲಿ (ಪಿಟಿಐ): ‘ಭಾರತದ ಜಿಡಿಪಿ ಗಾತ್ರವು 2047ರ ವೇಳೆಗೆ ₹2,905 ಲಕ್ಷ ಕೋಟಿಗೆ (35 ಟ್ರಿಲಿಯನ್ ಡಾಲರ್) ತಲುಪುವ ನಿರೀಕ್ಷೆಯಿದೆ. ಈ ನವ ಭಾರತದ ನಿರ್ಮಾಣಕ್ಕೆ ನವೋದ್ಯಮಗಳು ಬೆನ್ನಲುಬಾಗಲಿವೆ’ ಎಂದು ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
‘ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಲಿದೆ. ಇದಕ್ಕೆ ನವೋದ್ಯಮಗಳು ಬಹುದೊಡ್ಡ ಕೊಡುಗೆ ನೀಡಲಿವೆ ಎಂಬುದು ನನ್ನ ನಂಬಿಕೆ. ಹಾಗಾಗಿ, ಇದರಲ್ಲಿ ಪಾಲುದಾರರಾಗುವ ಅವಕಾಶವನ್ನು ಉದ್ಯಮಿಗಳು ಕಳೆದುಕೊಳ್ಳಬಾರದು’ ಎಂದು ಹೇಳಿದ್ದಾರೆ.
ನವದೆಹಲಿಯ ಭಾರತ ಮಂಟಪಂನಲ್ಲಿ ಮಾರ್ಚ್ 18ರಿಂದ 20ರ ವರೆಗೆ ನವೋದ್ಯಮಗಳ ಮಹಾಕುಂಭ ಆಯೋಜಿಸಲಾಗಿದೆ. 1,000ಕ್ಕೂ ಹೆಚ್ಚು ಪ್ರತಿನಿಧಿಗಳು, ಐದು ಸಾವಿರಕ್ಕೂ ಹೆಚ್ಚು ನವ ಉದ್ಯಮಿಗಳು ಸೇರಿದಂತೆ 40 ಸಾವಿರ ವ್ಯಾಪಾರ ಸಂದರ್ಶಕರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.