ADVERTISEMENT

ಬೆಂಗಳೂರು: ಸ್ಟಾರ್ಯದಿಂದ ಷೋರೂಂ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 14:01 IST
Last Updated 31 ಮೇ 2024, 14:01 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ರೆಟ್ರೊ ಫಿಟ್‌ಮೆಂಟ್ ಕಿಟ್‌ನ ತಯಾರಕರಾದ ಸ್ಟಾರ್ಯ ಮೊಬಿಲಿಟಿ, ಇತ್ತೀಚೆಗೆ ರಾಜಾಜಿನಗರದಲ್ಲಿ ತನ್ನ ಷೋರೂಂ ಉದ್ಘಾಟಿಸಿದೆ.

ಇಲ್ಲಿ ಹಲವಾರು ರಿಟ್ರೊಫಿಟೆಡ್ ಸ್ಕೂಟರ್‌ಗಳನ್ನು ಪ್ರದರ್ಶಿಸಲಾಗಿದೆ. ಸ್ಟಾರ್ಯವು ತನ್ನ ಹೊಸ ಪ್ಯಾಕೇಜ್ 50:50:50 ಅನ್ನು ಪರಿಚಯಿಸಿದೆ. ಆನ್-ದಿ-ಸ್ಪಾಟ್ ಬುಕಿಂಗ್‌ಗೆ ಆಕರ್ಷಕ ಕೊಡುಗೆಗಳನ್ನು ಸಹ ಪ್ರಕಟಿಸಿದೆ. ಉದ್ಘಾಟನೆ ವೇಳೆ ಸಂದರ್ಶಕರು ಮರುಹೊಂದಿಸಲಾದ ಸ್ಕೂಟರ್‌ಗಳನ್ನು ಪರೀಕ್ಷಾ ಸವಾರಿ (ಟೆಸ್ಟ್‌ ಡ್ರೈವ್‌) ಮಾಡಿದರು.

ADVERTISEMENT

ಪ್ರಸ್ತುತ, ಎರಡು ಸ್ಕೂಟರ್ ಮಾದರಿಗಳಿಗೆ ಬುಕಿಂಗ್‌ಗಳು ತೆರೆದಿದ್ದು, ಹೋಂಡ ಆಕ್ಟಿವಾ ಮತ್ತು ಸುಜುಕಿ ಆಕ್ಸೆಸ್ 125 ಲಭ್ಯವಿದೆ. ಗ್ರಾಹಕರು ₹1,999 ನೀಡಿ ಬುಕಿಂಗ್‌ ಮಾಡಿಕೊಳ್ಳಬಹುದಾಗಿದೆ. ಆದ್ಯತೆಗೆ ತಕ್ಕಂತೆ ಸ್ಕೂಟರ್ ಅನ್ನು ಹೊಂದಿಸಲು ಸೇವೆಗಳು ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ 6360900247 / 7348801540 ಸಂಪರ್ಕಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.