ADVERTISEMENT

ಬ್ಯಾಂಕ್ ಖಾಸಗೀಕರಣ: ವಿಆರ್‌ಎಸ್‌ ಜಾರಿ ಸಾಧ್ಯತೆ

ಪಿಟಿಐ
Published 8 ಜೂನ್ 2021, 16:37 IST
Last Updated 8 ಜೂನ್ 2021, 16:37 IST

ನವದೆಹಲಿ: ಖಾಸಗಿಯವರಿಗೆ ಮಾರಾಟ ಆಗಲಿರುವ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿಗೊಳಿಸುವ ಸಾಧ್ಯತೆ ಇದೆ.

‘ಆಕರ್ಷಕವಾದ ವಿಆರ್‌ಎಸ್‌ ಯೋಜನೆ ಜಾರಿಗೆ ತಂದರೆ ಈ ಬ್ಯಾಂಕ್‌ಗಳಲ್ಲಿನ ನೌಕರರ ಸಂಖ್ಯೆ ಕಡಿಮೆ ಆಗುತ್ತದೆ, ಖಾಸಗಿಯವರಿಗೆ ಖರೀದಿಗೆ ಸರಿಹೊಂದುವಂತೆ ಆಗುತ್ತದೆ’ ಎಂದು ಮೂಲಗಳು ಹೇಳಿವೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಬ್ಯಾಂಕ್ ಆಫ್‌ ಇಂಡಿಯಾವನ್ನು ಖಾಸಗೀಕರಣಕ್ಕೆ ಪರಿಗಣಿಸುವ ಸಾಧ್ಯತೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.