ADVERTISEMENT

ಶೇ 13ರಷ್ಟು ಶಾಖೆಗಳನ್ನು ಮುಚ್ಚಲಿದೆ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ

ರಾಯಿಟರ್ಸ್
Published 5 ಮೇ 2022, 14:28 IST
Last Updated 5 ಮೇ 2022, 14:28 IST
   

ಮುಂಬೈ: ಸರ್ಕಾರಿ ಸ್ವಾಮ್ಯದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇಕಡ 13ರಷ್ಟು ಶಾಖೆಗಳನ್ನು ಮುಚ್ಚುವ ಚಿಂತನೆ ನಡೆಸಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಲವು ವರ್ಷಗಳಿಂದ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅದನ್ನು ಸುಧಾರಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ ಎನ್ನುವ ಮಾಹಿತಿಯು ಸುದ್ದಿಸಂಸ್ಥೆಗೆ ದೊರೆತಿರುವ ದಾಖಲೆಪತ್ರಗಳಿಂದ ತಿಳಿದುಬಂದಿದೆ.

ಕೆಲವು ಶಾಖೆಗಳನ್ನು ಮುಚ್ಚುವ ಮೂಲಕ ಅಥವಾ ವಿಲೀನಗೊಳಿಸುವ ಮೂಲಕ 2023ರ ಮಾರ್ಚ್‌ ಒಳಗಾಗಿ ಶಾಖೆಗಳ ಸಂಖ್ಯೆ ಕಡಿಮೆ ಮಾಡಲು ಮುಂದಾಗಿದೆ. ಸದ್ಯ 4,594 ಶಾಖೆಗಳನ್ನು ಬ್ಯಾಂಕ್‌ ಹೊಂದಿದೆ.

ADVERTISEMENT

ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಮುಖವಲ್ಲದ ಕೆಲವು ಆಸ್ತಿಗಳನ್ನು ಮಾರಾಟ ಮಾಡಲು ಸಹ ಬ್ಯಾಂಕ್‌ ಕ್ರಮ ಕೈಗೊಂಡಿದೆ ಎಂದು ಸರ್ಕಾರದ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಬ್ಯಾಂಕ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.