ADVERTISEMENT

ಮೂರನೇ ದಿನವೂ ಷೇರುಪೇಟೆ ಕುಸಿತ

ಪಿಟಿಐ
Published 18 ಜನವರಿ 2024, 15:26 IST
Last Updated 18 ಜನವರಿ 2024, 15:26 IST
ಷೇರುಪೇಟೆ ಕುಸಿತ
ಷೇರುಪೇಟೆ ಕುಸಿತ   

ಮುಂಬೈ: ಷೇರುಪೇಟೆಯಲ್ಲಿ ಮೂರನೇ ದಿನವಾದ ಗುರುವಾರವೂ ಕರಡಿ ಕುಣಿತ ಮುಂದುವರಿದಿದ್ದು, ಸೂಚ್ಯಂಕಗಳು ನಷ್ಟ ದಾಖಲಿಸಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾಗಿದ್ದರಿಂದ ಷೇರುಪೇಟೆ ಇಳಿಕೆಯ ಹಾದಿ ಹಿಡಿಯಿತು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.  

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 313 ಅಂಶ ಇಳಿಕೆಯಾಗಿ, 71,186ಕ್ಕೆ ಸ್ಥಿರಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 109 ಅಂಶ ಕಡಿಮೆಯಾಗಿ, 21,462ರಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿದೆ.

ADVERTISEMENT

ಮೂರು ದಿನಗಳ ವಹಿವಾಟಿನಲ್ಲಿ ಬಿಎಸ್‌ಇ 2,141 ಅಂಶ (ಶೇ 3) ಮತ್ತು ನಿಫ್ಟಿ 635 ಅಂಶ (ಶೇ 2.89) ನಷ್ಟ ಕಂಡಿವೆ.

ನಷ್ಟ ಕಂಡ ಕಂಪನಿಗಳು: ಎನ್‌ಟಿಪಿಸಿ, ಏಷ್ಯನ್‌ ಪೇಂಟ್ಸ್‌, ಪವರ್‌ ಗ್ರಿಡ್‌, ಇಂಡಸ್‌ಇಂಡ್‌ ಬ್ಯಾಂಕ್‌, ನೆಸ್ಟ್ಲೆ ಮತ್ತು ಮಾರುತಿ ಕಂಪನಿಯ ಷೇರುಗಳು ನಷ್ಟ ಕಂಡಿವೆ. 

ಲಾಭ ಕಂಡ ಕಂಪನಿಗಳು: ರಿಲಯನ್ಸ್‌ ಇಂಡಸ್ಟ್ರೀಸ್‌, ಸನ್‌ಫಾರ್ಮಾ, ಟೆಕ್‌ ಮಹೀಂದ್ರ, ಟಾಟಾ ಮೋಟರ್ಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಲಾರ್ಸೆನ್‌ ಆ್ಯಂಡ್‌ ಟೊರ್ಬೊ ಲಾಭ ದಾಖಲಿಸಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಈಕ್ವಿಟಿಗಳಲ್ಲಿ ಬುಧವಾರ ₹10,578 ಕೋಟಿ ಹೂಡಿಕೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.