ಮುಂಬೈ: ಸರಿಯಾಗಿ ಕೆವೈಸಿ ಪರಿಶೀಲನೆ ಮಾಡದೆ ಖಾತೆಗಳನ್ನು ತೆರೆಯುವುದು ಸೇರಿದಂತೆ ಕಾನೂನು ಉಲ್ಲಂಘನೆ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಸೂಚಿಸಿದ್ದಾರೆ.
ಇಂತಹ ಉಲ್ಲಂಘನೆಗಳು ಅಲ್ಪಾವಧಿಯಲ್ಲಿ ಗಳಿಕೆ ತರಬಹುದು. ಆದರೆ, ದೀರ್ಘಾವಧಿಯಲ್ಲಿ ಬ್ಯಾಂಕ್‌ಗಳ ಗೌರವಕ್ಕೆ ಧಕ್ಕೆ, ಹಣಕಾಸು ದಂಡಕ್ಕೆ ದಾರಿ ಮಾಡಿಕೊಡುವುದಲ್ಲದೆ ಹೆಚ್ಚು ಅಪಾಯ ಸೃಷ್ಟಿಸಲಿವೆ. ಅದಕ್ಕಾಗಿ ಚೌಕಟ್ಟನ್ನು ಸದೃಢಗೊಳಿಸಬೇಕು ಎಂದು ಖಾಸಗಿ ವಲಯದ ಬ್ಯಾಂಕ್‌ಗಳ ನಿರ್ದೇಶಕರ ಸಮ್ಮೇಳನದಲ್ಲಿ ದಾಸ್ ಹೇಳಿದ್ದಾರೆ.
ದೇಶದ ಬ್ಯಾಂಕಿಂಗ್ ವಲಯವು ಸದೃಢ ಮತ್ತು ಸ್ಥಿರವಾಗಿದೆ. ಬ್ಯಾಂಕ್‌ನ ಮಂಡಳಿಗಳು ಆಂತರಿಕ ಆಡಳಿತದ ಚೌಕಟ್ಟನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.