ನವದೆಹಲಿ: 2018–19ನೇ ಮಾರುಕಟ್ಟೆ ವರ್ಷದಲ್ಲಿ 17.44 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತು ಮಾಡಲಾಗಿದೆ.
ಒಟ್ಟಾರೆ ರಫ್ತಿನಲ್ಲಿ 8 ಲಕ್ಷ ಟನ್‌ಗಳಷ್ಟು ಕಚ್ಚಾ ಸಕ್ಕರೆ ಸೇರಿದೆ ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಒಕ್ಕೂಟ (ಎಐಎಸ್‌ಟಿಎ) ಮಾಹಿತಿ ನೀಡಿದೆ.
ಬಾಂಗ್ಲಾದೇಶ, ಶ್ರೀಲಂಕಾ, ಸೊಮಾಲಿಯಾ ಮತ್ತು ಇರಾನ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದ ಕಾರಣಕ್ಕಾಗಿ2017–18ನೇ ಮಾರುಕಟ್ಟೆ ವರ್ಷದಲ್ಲಿ ಕೇವಲ 5 ಲಕ್ಷ ಟನ್ ರಫ್ತು ಮಾಡಲಾಗಿತ್ತು. ಹೆಚ್ಚುವರಿ ದಾಸ್ತಾನು ತಗ್ಗಿಸಲು 2018–19ನೇ ಮಾರುಕಟ್ಟೆ ವರ್ಷದಲ್ಲಿ 50 ಲಕ್ಷ ಟನ್ ರಫ್ತು ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಸೂಚನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.