ADVERTISEMENT

ಸಕ್ಕರೆ ರಫ್ತು ಹೆಚ್ಚಳ ನಿರೀಕ್ಷೆ

ಪಿಟಿಐ
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST
   

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ‌ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ರಫ್ತು 50 ಲಕ್ಷ ಟನ್‌ಗಳನ್ನೂ ದಾಟುವ ಸಾಧ್ಯತೆ ಇದೆ ಎಂದು ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಹೇಳಿದೆ.

2018–19ರಲ್ಲಿ 38 ಲಕ್ಷ ಟನ್‌ಗಳಷ್ಟು ಸಕ್ಕರೆ ಆಮದು ಮಾಡಲಾಗಿತ್ತು. ಆದರೆ, ಆ ವರ್ಷಕ್ಕೆ 50 ಲಕ್ಷ ಟನ್‌ ಆಮದು ಮಾಡಲು ಅವಕಾಶ ನೀಡಲಾಗಿತ್ತು.

ಪ್ರಸಕ್ತ ವರ್ಷಕ್ಕೆ 60 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತು ಮಾಡಲು ಅವಕಾಶ ಕಲ್ಪಿಸಿದೆ. ಇದರಲ್ಲಿ ಈಗಾಗಲೇ 16 ಲಕ್ಷ ಟನ್‌ ರಫ್ತು ಮಾಡಲಾಗಿದೆ.

ADVERTISEMENT

ಫೆಬ್ರುವರಿ 15ರ ಅಂತ್ಯಕ್ಕೆ ಸಕ್ಕರೆ ಉತ್ಪಾದನೆ 1.68 ಕೋಟಿ ಟನ್‌ಗಳಿಗೆ ತಲುಪಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 2.19 ಕೋಟಿ ಟನ್‌ ಉತ್ಪಾದನೆ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.