ನವದೆಹಲಿ: ಜುಲೈ ಅಂತ್ಯದವರೆಗೆ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ₹1.06 ಲಕ್ಷ ಕೋಟಿ ಪಾವತಿಸಿದ್ದು, ಇನ್ನೂ ₹5,188 ಕೋಟಿ ಮೊತ್ತವನ್ನು ಬಾಕಿ ಉಳಿಸಿಕೊಂಡಿವೆ ಎಂದು ಕೇಂದ್ರ ಸರ್ಕಾರವು, ಲೋಕಸಭೆಗೆ ತಿಳಿಸಿದೆ.
‘ರೈತರಿಗೆ ಕಬ್ಬು ಬಾಕಿ ಪಾವತಿಯು ನಿರಂತರ ಪ್ರಕ್ರಿಯೆಯಾಗಿದೆ. ಹಂತ ಹಂತವಾಗಿ ಬಾಕಿ ಮೊತ್ತ ಪಾವತಿಸುತ್ತವೆ’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಖಾತೆ ಸಚಿವೆ ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ ತಿಳಿಸಿದ್ದಾರೆ.
2023–24ರ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್–ಸೆಪ್ಟೆಂಬರ್) ರೈತರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಿರುವ ಮೊತ್ತವು ₹1.11 ಲಕ್ಷ ಕೋಟಿ ಆಗಿದೆ. ಉತ್ತರ ಪ್ರದೇಶದಲ್ಲಿರುವ ಕಾರ್ಖಾನೆಗಳು ಬೆಳೆಗಾರರಿಗೆ ಪಾವತಿಸಬೇಕಿರುವ ಮೊತ್ತ ₹35,910 ಕೋಟಿ ಆಗಿದೆ. ಈ ಪೈಕಿ ₹32,470 ಕೋಟಿ ಪಾವತಿಸಿವೆ. ಇನ್ನೂ ₹3,340 ಕೋಟಿ ಬಾಕಿ ಉಳಿಸಿಕೊಂಡಿವೆ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.