ADVERTISEMENT

ಸಕ್ಕರೆ ಉತ್ಪಾದನೆ ಶೇ 31ರಷ್ಟು ಹೆಚ್ಚಳ

ಪಿಟಿಐ
Published 18 ಜನವರಿ 2021, 15:03 IST
Last Updated 18 ಜನವರಿ 2021, 15:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2020–21ನೇ ಮಾರುಕಟ್ಟೆ ವರ್ಷದ ಮೂರೂವರೆ ತಿಂಗಳಿನಲ್ಲಿ ದೇಶದ ಸಕ್ಕರೆ ಉತ್ಪಾದನೆಯು ಶೇಕಡ 31ರಷ್ಟು ಹೆಚ್ಚಾಗಿದ್ದು, 142.70 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಹೇಳಿದೆ.

2019–20ನೇ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ 108.94 ಲಕ್ಷ ಟನ್‌ಗಳಷ್ಟು ಸಕ್ಕರೆ ಉತ್ಪಾದನೆ ಆಗಿತ್ತು.

ದೇಶದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಉತ್ತರಪ್ರದೇಶ ರಾಜ್ಯದಲ್ಲಿ ಜನವರಿ 15ರವರೆಗೆ ಸಕ್ಕರೆ ಉತ್ಪಾದನೆ 42.99 ಲಕ್ಷ ಟನ್‌ಗಳಷ್ಟಿದೆ. ಹಿಂದಿನ ಅವಧಿಯಲ್ಲಿ 43.78 ಲಕ್ಷ ಟನ್‌ಗಳಷ್ಟಿತ್ತು.

ADVERTISEMENT

ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆ 25.51 ಲಕ್ಷ ಟನ್‌ಗಳಿಂದ 51.55 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಉತ್ಪಾದನೆಯು 21.90 ಲಕ್ಷ ಟನ್‌ಗಳಿಂದ 29.80 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ.

ಮಾರುಕಟ್ಟೆಯ ವರದಿಯ ಪ್ರಕಾರ, 2020ರ ಅಕ್ಟೋಬರ್‌–ಡಿಸೆಂಬರ್ ಅವಧಿಯಲ್ಲಿ 3 ಲಕ್ಷ ಟನ್‌ ಸಕ್ಕರೆ ರಫ್ತು ಮಾಡಲಾಗಿದೆ.

ಉತ್ಪಾದನೆ ವಿವರ

310 ಲಕ್ಷ ಟನ್‌

2020-21ನೇ ಮಾರುಕಟ್ಟೆ ವರ್ಷಕ್ಕೆ ಅಂದಾಜು

274 ಲಕ್ಷ ಟನ್‌

2019-20ನೇ ಮಾರುಕಟ್ಟೆ ವರ್ಷದಲ್ಲಿ ಆಗಿರುವ ಉತ್ಪಾದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.