ADVERTISEMENT

ಸಕ್ಕರೆ ಉತ್ಪಾದನೆ ಇಳಿಕೆ

ಪಿಟಿಐ
Published 18 ಡಿಸೆಂಬರ್ 2019, 19:40 IST
Last Updated 18 ಡಿಸೆಂಬರ್ 2019, 19:40 IST
ಸಕ್ಕರೆ
ಸಕ್ಕರೆ   

ನವದೆಹಲಿ: ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಡಿಸೆಂಬರ್ 15ರವರೆಗೆ 45.8 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 35ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ತಿಳಿಸಿದೆ.

2018–19ನೇ ಮಾರುಕಟ್ಟೆ ವರ್ಷದಲ್ಲಿ 473 ಸಕ್ಕರೆ ಕಾರ್ಖಾನೆಗಳು 70.5 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಿದ್ದವು. ಈ ಬಾರಿ 406 ಕಾರ್ಖಾನೆಗಳು ಕಬ್ಬು ಅರೆಯುವಿಕೆ ನಡೆಸಿವೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಪ್ರವಾಹ ಸ್ಥಿತಿಯಿಂದಾಗಿ ಇಳುವರಿ ಕುಂಠಿತಗೊಂಡಿದೆ. ಇದರ ಜತೆಗೆ ಸಕ್ಕರೆ ಕಾರ್ಖಾನೆಗಳು ಒಂದು ತಿಂಗಳು ತಡವಾಗಿ ಕಬ್ಬು ಅರೆಯುವಿಕೆ ಆರಂಭಿಸಿವೆ. ಈ ಎಲ್ಲಾ ಕಾರಣಗಳಿಂದಾಗಿ ಉತ್ಪಾದನೆಯಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಶೇ 21.5ರಷ್ಟು ಇಳಿಕೆಯಾಗಲಿದ್ದು 2.6 ಕೋಟಿ ಟನ್‌ ಉತ್ಪಾದನೆ ಆಗಲಿದೆ ಎಂದು ಸಂಘವು ಅಂದಾಜು ಮಾಡಿದೆ.

ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆಯು 29 ಲಕ್ಷ ಟನ್‌ಗಳಿಂದ 7.66 ಲಕ್ಷ ಟನ್‌ಗಳಿಗೆ ಹಾಗೂ ಕರ್ನಾಟಕ 13.9 ಲಕ್ಷ ಟನ್‌ಗಳಿಂದ 10.6 ಲಕ್ಷ ಟನ್‌ಗಳಿಗೆ ಇಳಿಕೆಯಾಗಿ’ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.