ನವದೆಹಲಿ: ದೇಶದ ಸಕ್ಕರೆ ಉತ್ಪಾದನೆ 2018–19ರ ಮಾರುಕಟ್ಟೆ ವರ್ಷದಲ್ಲಿ ಫೆಬ್ರುವರಿ 15ರವರೆಗೆಶೇ 15ರಷ್ಟು ಹೆಚ್ಚಾಗಿದ್ದು 2.19 ಕೋಟಿ ಟನ್ ಉತ್ಪಾದನೆ ಆಗಿದೆ.
ಹಿಂದಿನ ವರ್ಷ ಇದೇ ಅವಧಿಯಲ್ಲಿ 2.03 ಕೋಟಿ ಟನ್ ಉತ್ಪಾದನೆ ಆಗಿತ್ತುಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಎ) ಮಾಹಿತಿ ನೀಡಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮುಂಚಿತವಾಗಿಯೇ ಕಬ್ಬು ಅರೆಯುವಿಕೆ ಆರಂಭವಾಗಿದೆ. ಹೀಗಾಗಿ ಉತ್ಪಾದನೆಯಲ್ಲಿ ಏರಿಕೆ ಕಂಡುಬಂದಿದೆ. 2017-18ನೇ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್–ಸೆಪ್ಟೆಂಬರ್) 3.25 ಕೋಟಿ ಟನ್ ಉತ್ಪಾದನೆ ಆಗಿತ್ತು. ಈ ಬಾರಿ ಅದಕ್ಕಿಂತಲೂ ಕಡಿಮೆ ಅಂದರೆ 3.07 ಕೋಟಿ ಟನ್ ಉತ್ಪಾದನೆಯ ಅಂದಾಜು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.