ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ದೇಶಕ್ಕೆ ದಾಖಲೆ ಪ್ರಮಾಣದಲ್ಲಿ ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗಿದೆ.
ಒಟ್ಟು 4.45 ಲಕ್ಷ ಟನ್‌ನಷ್ಟು ಆಮದಾಗಿದೆ. ಫೆಬ್ರುವರಿಯಲ್ಲಿ 2.97 ಲಕ್ಷ ಟನ್ ಆಮದಾಗಿತ್ತು.
ಮಾರ್ಚ್‌ನಲ್ಲಿ ದೇಶದ ಒಟ್ಟು ಖಾದ್ಯ ತೈಲ ಆಮದು ಪ್ರಮಾಣವು 11.49 ಲಕ್ಷ ಟನ್‌ಗೆ ಮುಟ್ಟಿದೆ. ಭಾರತವು ಜಾಗತಿಕ ಮಟ್ಟದಲ್ಲಿನ ಖಾದ್ಯ ತೈಲದ ಬೆಲೆ ಇಳಿಕೆಯ ಲಾಭವನ್ನು ಪಡೆದುಕೊಂಡಿದೆ. ಹಾಗಾಗಿ, ಆಮದು ಪ್ರಮಾಣವು ಹೆಚ್ಚಳವಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಗುರುವಾರ ತಿಳಿಸಿದೆ.
2023ರ ಮಾರ್ಚ್‌ನಲ್ಲಿ 1.48 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದೆ.
ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಕಚ್ಚಾ ಸೋಯಾಬಿನ್ ತೈಲ ಆಮದು ಏರಿಕೆಯಾಗಿದೆ. ಒಟ್ಟು 2.18 ಲಕ್ಷ ಟನ್ ಆಮದಾಗಿದೆ.
ಕಚ್ಚಾ ತಾಳೆ ಎಣ್ಣೆ ಆಮದು 5.51 ಲಕ್ಷ ಟನ್‌ನಿಂದ 3.81 ಲಕ್ಷ ಟನ್‌ಗೆ ಇಳಿಕೆಯಾಗಿದೆ. ಆರ್‌ಬಿಡಿ ಪಾಲ್ಮೋಲಿಯನ್ 1.69 ಲಕ್ಷ ಟನ್‌ನಿಂದ 93,799ಕ್ಕೆ ಕಡಿಮೆಯಾಗಿದೆ. ಆದರೆ, ಕಚ್ಚಾ ತಾಳೆ ಕಾಯಿ ಆಮದು 8,006 ಟನ್‌ನಿಂದ 10,499 ಟನ್‌ಗೆ ಹೆಚ್ಚಳವಾಗಿದೆ ಎಂದು ಎಸ್‌ಇಎ ತಿಳಿಸಿದೆ.
ಇಂಡೊನೇಷ್ಯಾ ಮತ್ತು ಮಲೇಷ್ಯಾದಲ್ಲಿ ತಾಳೆ ಎಣ್ಣೆ ಉತ್ಪಾದನೆ ಮತ್ತು ದಾಸ್ತಾನು ಇಳಿಕೆ ಆಗಿದೆ. ಇದರಿಂದ ಸೂರ್ಯಕಾಂತಿ ಎಣ್ಣೆಗಿಂತಲೂ ತಾಳೆ ಎಣ್ಣೆ ದರ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.