ADVERTISEMENT

ಸ್ವಿಗ್ಗಿ: ಒಂದೇ ದಿನದಲ್ಲಿ 500 ಉದ್ಯೋಗಿಗಳು ಕೋಟ್ಯಧೀಶರು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:30 IST
Last Updated 13 ನವೆಂಬರ್ 2024, 23:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‌‌ನವದೆಹಲಿ: ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಸ್ವಿಗ್ಗಿ ಕಂಪನಿಯು ₹11,327 ಕೋಟಿ ಬಂಡವಾಳ ಸಂಗ್ರಹಿಸಿದ ಬೆನ್ನಲ್ಲೇ, ಅದರ 500 ಉದ್ಯೋಗಿಗಳಿಗೆ ಕೋಟ್ಯಧಿಪತಿಗಳಾಗುವ ಭಾಗ್ಯ ಒಲಿದಿದೆ.

ಕಂಪನಿಯಲ್ಲಿ ಒಟ್ಟು 5 ಸಾವಿರ ಉದ್ಯೋಗಿಗಳು ಇದ್ದಾರೆ. ಉದ್ಯೋಗಿಗಳ ಷೇರು ಮಾಲೀಕತ್ವ ಯೋಜನೆಗಳ (ಇಎಸ್‌ಒಪಿ) ಮೂಲಕ ಎಲ್ಲಾ ಉದ್ಯೋಗಿಗಳಿಗೆ ₹9,000 ಕೋಟಿ ಮೌಲ್ಯದ ಷೇರುಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ಕಂಪನಿಯಲ್ಲಿ ನಿಷ್ಠೆಯಿಂದ ದುಡಿದ ಶೇ 10ರಷ್ಟು ಹಾಲಿ ಹಾಗೂ ಮಾಜಿ ನೌಕರರು ಒಂದೇ ದಿನದಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.

ಬುಧವಾರ ಕಂಪನಿಯು ಅಧಿಕೃತವಾಗಿ ಷೇರು ಮಾರುಕಟ್ಟೆ ಪ್ರವೇಶಿಸಿದೆ. ಐಪಿಒ ಮೂಲಕ ಷೇರು ಹಂಚಿಕೆ ದರವನ್ನು ₹371ರಿಂದ ₹390ಕ್ಕೆ ನಿಗದಿಪಡಿಸಲಾಗಿತ್ತು.

ADVERTISEMENT

ಬಿಎಸ್‌ಇಯಲ್ಲಿ ಪ್ರತಿ ಷೇರು ಶೇ 5.64ರಷ್ಟು ಪ್ರೀಮಿಯಂ ದರದಲ್ಲಿ ₹412ಕ್ಕೆ ನಿಗದಿಯಾಗಿತ್ತು. ವಹಿವಾಟಿನ ಅಂತ್ಯಕ್ಕೆ ಶೇ 16.91ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹455.95 ಆಗಿದೆ.

ಎನ್‌ಎಸ್‌ಇಯಲ್ಲಿ ಪ್ರತಿ ಷೇರು ಶೇ 7.69ರಷ್ಟು ಪ್ರೀಮಿಯಂ ದರದಲ್ಲಿ ₹420ಕ್ಕೆ ನಿಗದಿಪಡಿಸಲಾಗಿತ್ತು. ಶೇ 16.92ರಷ್ಟು ಏರಿಕೆಯಾಗಿದ್ದು, ₹456 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ₹1.02 ಲಕ್ಷ ಕೋಟಿಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.