ನವದೆಹಲಿ: ವಿದೇಶದಲ್ಲಿ ನೆಲಸಿರುವವರು ಭಾರತದಲ್ಲಿನ ತಮ್ಮ ಪ್ರೀತಿಪಾತ್ರರಿಗೆ ಆನ್‌ಲೈನ್ ಮೂಲಕ ಆಹಾರವನ್ನು ಆರ್ಡರ್ ಮಾಡುವ ಸಂಬಂಧ ಸ್ವಿಗ್ಗಿ ಕಂಪನಿಯು ಹೊಸ ಸೇವೆಯನ್ನು ಪರಿಚಯಿಸಿದೆ.
ಅಮೆರಿಕ, ಕೆನಡಾ, ಜರ್ಮನಿ ಮತ್ತು ಬ್ರಿಟನ್ ಸೇರಿ ವಿದೇಶದಲ್ಲಿ ನೆಲಸಿರುವ ಜನರು ಸ್ವಿಗ್ಗಿ ಆ್ಯಪ್‌ನಲ್ಲಿನ ‘ಅಂತರರಾಷ್ಟ್ರೀಯ ಲಾಗಿನ್’ ಮೂಲಕ ಭಾರತದಲ್ಲಿ ಇರುವವರಿಗೆ ಆರ್ಡರ್ ಮಾಡಬಹುದಾಗಿದೆ. ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ಸ್ ಅಥವಾ ಯುಪಿಐ ಆಯ್ಕೆ ಮೂಲಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.