ADVERTISEMENT

ಟೋಕನೈಸೇಷನ್‌ ವ್ಯವಸ್ಥೆ ಸಿದ್ಧ: ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:21 IST
Last Updated 30 ಸೆಪ್ಟೆಂಬರ್ 2022, 16:21 IST

ಮುಂಬೈ: ಕ್ರೆಡಿಟ್ ಹಾಗೂ ಡೆಬಿಟ್‌ ಕಾರ್ಡ್‌ ವಿವರಗಳನ್ನು ಟೋಕನ್ ರೂಪದಲ್ಲಿ ಮಾತ್ರವೇ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂಬ ನಿಯಮವು ಶನಿವಾರದಿಂದ ಜಾರಿಗೆ ಬರಲಿದ್ದು, ಅಂದಾಜು 35 ಕೋಟಿ ಕಾರ್ಡ್‌ಗಳ ವಿವರವು ಈ ರೂಪದಲ್ಲಿ ಸಂಗ್ರಹವಾಗಿದೆ ಎಂದು ಆರ್‌ಬಿಐ ಹೇಳಿದೆ.

ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿಯಮವನ್ನು ಆರ್‌ಬಿಐ ಜಾರಿಗೆ ತರುತ್ತಿದೆ. ಈ ನಿಯಮದ ಜಾರಿಗೆ ಆರ್‌ಬಿಐ ಗಡುವನ್ನು ಮತ್ತೆ ಮತ್ತೆ ವಿಸ್ತರಿಸಿತ್ತು. ‘ಈಗ ವ್ಯವಸ್ಥೆ ಸಿದ್ಧವಾಗಿದೆ’ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ. ರವಿ ಶಂಕರ್ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆದ ಒಟ್ಟು ವಹಿವಾಟಿನ ಶೇಕಡ 40ರಷ್ಟು ಟೋಕನ್ ರೂಪದಲ್ಲಿನ ಮಾಹಿತಿ ಆಧರಿಸಿ ನಡೆದಿವೆ ಎಂದು ಅವರು ಹೇಳಿದ್ದಾರೆ. ಆಗಸ್ಟ್‌ ಅಂತ್ಯದ ವೇಳೆಗೆ ದೇಶದಲ್ಲಿ ಒಟ್ಟು 101 ಕೋಟಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳು ಇದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT